ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ 8ನೇ ಮಾಸಿಕ ಸಭೆಯನ್ನು ನಡೆಸಲಾಯಿತು.
ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಮಾಸಿಕ ಸಭೆ ಅಧ್ಯಕ್ಷರಾದ ಚಿನ್ನಹಳ್ಳಿ ಬಾಲುವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಯಾಸಳೂರು ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿ , ಕಾಡಾನೆ ಸಮಸ್ಯೆ ಹಾಗೂ ಅದಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.ಸಭೆಯಲ್ಲಿ ಭಾಗವಹಿಸಿದ ಗ್ರಾಮಸ್ಥರು ಕಾಡಾನೆ ಸಮಸ್ಯೆಗಳಿಂದಾಗಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಅರಣ್ಯ ಅಧಿಕಾರಿಗಳು ,ಈ ಭಾಗದಲ್ಲಿ ಕಾಡಾನೆ ಸಮಸ್ಯೆ ಜಾಸ್ತಿ ಇರುವುದರಿಂದ ಪ್ರತಿ ವರ್ಷ ರೈತರು ಸಮಸ್ಯೆಎದುರಿಸುತ್ತಿದ್ದು, ಸತ್ಯದ ಪರಿಸ್ಥಿತಿಯಲ್ಲಿ ಸಮಸ್ಯೆ ಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಸರ್ಕಾರದ ಕೊಡುತ್ತಿರುವ ಅನುದಾನಗಳನ್ನು ಬಳಸಿಕೊಂಡು ಸೋಲಾರ್ ವಿದ್ಯುತ್ ಬೇಲಿಗಳನ್ನು ಹಾಕಿಕೊಳ್ಳುವ ಮೂಲಕ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೆ ಈ ಅನುದಾನವನ್ನು ಪಡೆಯಲು ಸರ್ಕಾರದ ಗೈಡ್ಲೈನ್ ಅನುಸರಿಸಿ ಮಾಡುವುದರಿಂದ ಅನುದಾನ ಪಡೆದುಕೊಳ್ಳಬಹುದು ಇಲ್ಲವಾದರೆ ಅನುದಾನವು ರೈತರಿಗೆ ಸಿಗುವುದಿಲ್ಲ.ಅಲ್ಲದೆ ರೈತರು ಮೊದಲು ಕಾಮಗಾರಿ ಮುಗಿಸಿ ನಂತರ ಸರ್ಕಾರ ಕೊಡುವ ಅನುದಾನ ಪಡೆದು ಕೊಳ್ಳಬೇಕು. ಎಂದು ಮಾಹಿತಿ ತಿಳಿಸಿದರು.
ಈ ವೇಳೆ ಸರ್ಕಾರದಿಂದ ಹಾನಿ ಒಳಗಾದ ರೈತರಿಗೆ ಸರಿಯಾದ ಕ್ರಮದಲ್ಲಿ ಪರಿಹಾರ ನೀಡುವ ಕೆಲಸ ಮಾಡಬೇಕು. ಒಂದು ಕಾಫಿ ಗಿಡ ಕಾಡಾನೆಯಿಂದ ಹಾನಿಯಾದರೆ 3000 ಸರ್ಕಾರದಿಂದ ಘೋಷಣೆಯಾಗಿದ್ದು ಅದು ರೈತರು ಈ ಭಾಗದಲ್ಲಿ 100 ಕಾಫಿ ಗಿಡಗಳು ನಾಶವಾಗಿದ್ದಲ್ಲಿ ಮೂರು ಲಕ್ಷ ಬರುವ ಪರಿಹಾರವು ಕೇವಲ ಒಂದುವರೆ ಲಕ್ಷಕ್ಕೆ ರೈತರು ತೃಪ್ತಿಪಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ.ಅದಕ್ಕೆ ಸಂಬಂಧ ಪಟ್ಟಂತೆ ಮೇಲಧಿಕಾರಿಗಳು ಗಮನಹರಿಸಿ ಸೂಕ್ತ ಪರಿಹಾರವನ್ನು ರೈತರಿಗೆ ನೀಡಬೇಕೆಂದು ಆಗ್ರಹಿಸಿದರು.
ಬೆಳಗಾರರ ಸಂಘದ ಮಾಸಿಕ ಸಭೆಗೆ ಯಾಸಳೂರು ಅರಣ್ಯ ಇಲಾಖೆಯಿಂದ ಬಂದ ನವೀನ್ ಹಾಗೂ ನರಸಿಂಹ ಮೂರ್ತಿ ತಮ್ಮ ಮಟ್ಟಿಗೆ ಕೊಟ್ಟಂತಹ ಮಾಹಿತಿ ರೈತರಿಗೆ ಸ್ವಲ್ಪ ಮಟ್ಟಿಗೆ ಖುಷಿ ತಂದಿದ್ದು ಮುಂದಿನ ವಾರದಲ್ಲಿ ಯಾಸಳೂರು ಅರಣ್ಯ ಇಲಾಖೆಯ ರೇಂಜರ್ ಜಗದೀಶ್ ಅವರು ಬೆಳೆಗಾರರ ಸಂಘಕ್ಕೆ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಮೇಲಾಧಿಕಾರಿಗೆ ಮನವಿ ಮಾಡಬೇಕು ಎಂದು ಬೆಳೆಗಾರರ ಸಂಘದವರು ಒತ್ತಾಯಿಸಿದರು.
ಅಲ್ಲದೆ ಜಿಲ್ಲಾ ಬೆಳೆಗಾರರ ಸಂಘವು, ಸತತ ಕಾಡಾನೆಯ ಸಮಸ್ಯೆಯಿಂದ ಅನುಭವಿಸುತ್ತಿರುವ ಸಮಸ್ಯೆಯನ್ನು ಸರ್ಕಾರದ ಮಟ್ಟಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಿಂದ ಬೆಂಗಳೂರು ವಿಧಾನಸೌಧದ ವರೆಗೆ ಕಾಲ್ನಡಿಗೆ ಜಾತವನ್ನು ಹಮ್ಮಿಕೊಂಡಿದ್ದು, ಅದಕ್ಕೆ ಸಂಬಂಧಪಟ್ಟಂತೆ ಪ್ರತಿ ಗ್ರಾಮ ಪಂಚಾಯಿತಿಯಿಂದ 500ಕ್ಕೂ ಹೆಚ್ಚು ಬೆಳೆಗಾರರು ಪಾಲ್ಗೊಳ್ಳುವ ಮೂಲಕ ಶಾಶ್ವತ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾರ್ಯಕ್ರಮದ ಉಪಾಧ್ಯಕ್ಷರಾದ ವಿಶ್ವನಾಥ್, ಗೌರವಾಧ್ಯಕ್ಷರಾದ ವಳಲಹಳ್ಳಿ ರಾಜೇಗೌಡ, ಜಿಲ್ಲಾ ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ .ಪಿ.ಕೃಷ್ಣೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಳಲಹಳ್ಳಿ ರಾಜೇ ಗೌಡ,ಸಹ ಕಾರ್ಯದರ್ಶಿ ದರ್ಶನ್ , ಹೋಬಳಿ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ರಮೇಶ್ , ಹೋಬಳಿ ಬೆಳಗಾರ ಸಂಘದ ನಿರ್ದೇಶಕರಾದ ಜಗನ್ನಾಥ್ , ಸುಧಾಕರ್ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಬೆಳೆಗಾರರ ಸಂಘದ ಸದಸ್ಯರು ಭಾಗವಹಿಸಿ 8ನೇ ಮಾಸಿಕ ಸಭೆಯನ್ನು ಯಶಸ್ವಿಗೊಳಿಸಿದರು..
Tags
ಸಕಲೇಶಪುರ