ಬೆಂಗಳೂರು: ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ, ಅದ್ಯಾವ ವಿಡಿಯೋ ಅವರ ಬಳಿ ಇದೆಯೋ ಬಿಡುಗಡೆ ಮಾಡಲಿ, ಅವರನ್ನು ಯಾರಾದರೂ ತಡೆದಿದ್ದಾರಾ? ಎಂದು ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಖಾರವಾಗಿ ಪ್ರಶ್ನಿಸಿದರು.
ಕುಮಾರಸ್ವಾಮಿ ತನ್ನ ವೈರಿಯೇನೂ ಅಲ್ಲ, ಆದರೆ ಹಿಟ್ ಅಂಡ್ ರನ್ ಪ್ರವೃತ್ತಿ ಅನುಸರಿಸುವುದು ಬೇಡ ಅಂತ ಅವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಗೌಡರು ಹೇಳಿದರು. ಸಿಎಂ ಕಚೇರಿಯಲ್ಲಿ ರೂ. 30 ಲಕ್ಷ ಕೇಳುತ್ತಾರೆ ಅಂತ ಅವರು ಸುಖಾ ಸುಮ್ಮನೆ ಅರೋಪ ಮಾಡುತ್ತಾರೆ. ಹಿಂದೆ ತಾವು ಆರೋಪಗಳಿಗೆ ಅವರು ಸೂಕ್ತ ಸಾಕ್ಷಾ÷್ಯಧಾರಗಳನ್ನು ಸಲ್ಲಿಸಿ ಯಾರಿಗೆ ಎಲ್ಲಿ ಕಳಿಸಬೇಕೋ ಅಲ್ಲಿಗೆ ಕಳಿಸಿದ್ದರು, ಈಗಲೂ ಹಾಗೆ ಮಾಡಲಿ ಎಂದು ಶಿವಲಿಂಗೇಗೌಡ ಸವಾಲೆಸೆದರು.
Tags
ರಾಜ್ಯ
