ಬೆಂಗಳೂರು/ಕೋಲಾರ ಜುಲೈ 04, : ವಿದ್ಯರ‍್ಥಿಗಳಿಗೆ ಉದ್ಯೋಗ ಆಧಾರಿತ ಶಿಕ್ಷಣವನ್ನು ಒದಗಿಸಲು ವಿಶ್ವವಿದ್ಯಾಲಯಗಳು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ರ‍್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಕೋಲಾರದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಉತ್ತರವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕು. ಸೈಬರ್ ಅಪರಾಧಗಳನ್ನು ತಪ್ಪಿಸಲು ವಿದ್ಯರ‍್ಥಿಗಳಿಗೆ ಮಾಹಿತಿ ನೀಡಲು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಸೆಮಿನಾರ್ ಆಯೋಜಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ವಿಶ್ವವಿದ್ಯಾಲಯದ ಕುಲಪತಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇಂದಿನ ಸಮಯವು ತಂತ್ರಜ್ಞಾನವಾಗಿದೆ. ದೇಶದ ಅಭಿವೃದ್ಧಿಯಲ್ಲಿ ತಾಂತ್ರಿಕ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ತಾಂತ್ರಿಕ ಗುಣಮಟ್ಟದ ಶಿಕ್ಷಣವು ಖಂಡಿತವಾಗಿಯೂ ಯುವಕರಿಗೆ ಕೌಶಲ್ಯ ಮತ್ತು ಶ್ರೇಷ್ಠತೆಯನ್ನು ಒದಗಿಸುತ್ತದೆ. ಯುವಕರನ್ನು ನುರಿತರನ್ನಾಗಿಸುವ ಮೂಲಕ ಮಾತ್ರ ನಾವು ಸ್ಥಳೀಯ ಮತ್ತು ಆತ್ಮನರ‍್ಭರ ಭಾರತಕ್ಕಾಗಿ ಧ್ವನಿ ನೀಡುವ ದಿಕ್ಕಿನಲ್ಲಿ ಮುನ್ನಡೆಯಬಹುದು ಎಂದು ಹೇಳಿದರು.
ವಿಶ್ವವಿದ್ಯಾನಿಲಯವು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳಿಗೆ ಗೌರವ ಪದವಿ ನೀಡಿ ಗೌರವಿಸಿದೆ. ಅವರ ಅತ್ಯುತ್ತಮ ಸಾಧನೆಗಳಿಗಾಗಿ ಮತ್ತು ಮಾನವ ಸಮಾಜದ ಪ್ರಗತಿಗೆ, ಮಹತ್ವದ ಕೊಡುಗೆಗಾಗಿ ಅಭಿನಂದಿಸುತ್ತೇನೆ ಮತ್ತು ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ. ಜನರು ಮತ್ತು ದೇಶದ ಹಿತದೃಷ್ಟಿಯಿಂದ ಸಮಾಜಕ್ಕಾಗಿ ನಿಮ್ಮ ಸೇವೆ ನಿರಂತರವಾಗಿರಲಿ ಎಂದು ಮನವಿ ಮಾಡಿದರು.
ಈ ದಿನ ಅನೇಕ ವಿದ್ಯರ‍್ಥಿಗಳಿಗೆ ಪದವಿಗಳನ್ನು ನೀಡಲಾಗಿದೆ. ಅನೇಕ ವಿದ್ಯರ‍್ಥಿಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ ಮತ್ತು ಪಿಎಚ್‍ಡಿ ಪದವಿಗಳನ್ನು ಸಹ ಸ್ವೀಕರಿಸಿದ್ದಾರೆ. ನೀವು ಪಡೆದ ಶಿಕ್ಷಣವನ್ನು ಇತರರಿಗೆ ನೀಡಲು ಪ್ರಯತ್ನಿಸಿ ಮತ್ತು ಮುಂಬರುವ ವಿದ್ಯರ‍್ಥಿಗಳು ನಿಮ್ಮಿಂದ ಸ್ಫರ‍್ತಿ ಪಡೆಯುವ ರೀತಿಯಲ್ಲಿ ಮುನ್ನಡೆಯಬೇಕು. ಸ್ವಾಮಿ ವಿವೇಕಾನಂದರು ಯುವಕರೇ ಎದ್ದೇಳಲು, ಎಚ್ಚರಗೊಳ್ಳಲು ಮತ್ತು ಗುರಿಯನ್ನು ಸಾಧಿಸುವವರೆಗೆ ನಿಲ್ಲಬೇಡಿ ಎಂದು ಕರೆ ನೀಡಿದ್ದರು, ಅದನ್ನು ಪರಿಪಾಲಿಸಿ. ಅವರು ತೋರಿಸಿದ ಮರ‍್ಗವನ್ನು ಅನುಸರಿಸುವ ಮೂಲಕ, ನೀವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಗೊಳಿಸಿಕೊಳ್ಳಿ. ಈ ಕೆಲಸದಲ್ಲಿ ವಿಶ್ವವಿದ್ಯಾಲಯದಿಂದ ಪಡೆದ ಶಿಕ್ಷಣ ಮತ್ತು ಬಲವಾದ ನೈತಿಕ ಅಡಿಪಾಯವು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಭಾರತ ರ‍್ಕಾರ ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ನವ ಭಾರತ, ಶ್ರೇಷ್ಠ ಭಾರತ, ಆತ್ಮನರ‍್ಭರ ಭಾರತ್ ಮಾಡಲು ಸಂಕಲ್ಪ ಮಾಡಿದ್ದಾರೆ. ಅತ್ಯುತ್ತಮ ಭಾರತ, ಸ್ವಾವಲಂಬಿ ಭಾರತ ಮಾಡುವಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ, "ರ‍್ವೇ ಭವಂತು ಸುಖಿನೋ, ರ‍್ವೇ ಸಂತು ನಿರಾಮಯ" ಎಂಬ ಮನೋಭಾವದಿಂದ ಪ್ರೇರಿತವಾದ "ವಸುಧೈವ ಕುಟುಂಬಕಂ" ತತ್ವಶಾಸ್ತ್ರ ಮತ್ತು ಧ್ಯಾನವನ್ನು ಕೇಂದ್ರೀಕರಿಸಿ, ಸರ‍್ವತ್ರಿಕ ಸಹೋದರತ್ವ ಮತ್ತು ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಕಲಿಸುತ್ತದೆ ಎಂದು ತಿಳಿಸಿದರು.
ಸ್ವಾತಂತ್ರ‍್ಯದ 75 ರ‍್ಷಗಳಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪರ‍್ವ "ಪ್ರಗತಿಯನ್ನು" ಸಾಧಿಸಿದೆ ಮತ್ತು ದೇಶದ ರ‍್ಥಿಕತೆಯು ಹೆಚ್ಚು ಬಲಗೊಂಡಿದೆ. ಇಂದು ನಮ್ಮ ರ‍್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ರ‍್ಥಿಕತೆಯಾಗಿದೆ. ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನರ‍್ಮಿಸುವ ಮುಂದಿನ 25 ರ‍್ಷಗಳು ಅಮೃತ ಕಾಲ. ನಮ್ಮ ದೇಶವನ್ನು ವಿಶ್ವದ ಅತ್ಯುತ್ತಮ ದೇಶಗಳ ರ‍್ಗಕ್ಕೆ ತರುವ ರ‍್ತವ್ಯದ ಅವಧಿಯಾಗಿದೆ. ಈ ರ‍್ತವ್ಯದ ಅವಧಿಯನ್ನು ಅವಕಾಶವನ್ನಾಗಿ ಪರಿರ‍್ತಿಸುವಲ್ಲಿ ನಾವು ಪಾಲುದಾರರಾಗಿರಬೇಕು ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವರಾದ ಎಂ.ಸಿ. ಸುಧಾಕರ್, ಕುಲಪತಿ ನಿರಂಜನ್, ಮುಖ್ಯ ಅತಿಥಿ ಸಾಯಿನಾಥ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.