ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ಹೆತ್ತೂರು ಹಾಗೂ ವಣಗುರು ಕ್ಲಸ್ಟರ್ ನ 16 ಶಾಲೆಯ 260 ವಿದ್ಯಾರ್ಥಿಗಳಿಗೆ ಸುಮಾರು 700ಕ್ಕೂ ಹೆಚ್ಚು ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ಮಂಗಳವಾರ ವಿತರಿಸಲಾಯಿತು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಸಕಲೇಶಪುರ ಘಟಕ ಮತ್ತು “ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ” ವತಯಿಂದ ಸಮಾಜ ಸೇವಕರು ಹಾಗೂ ದಾನಿಗಳು ಆದ ಕಾಮನಹಳ್ಳಿ ತೀರ್ಥಾನಂದ (ಕೀರ್ತಿ) ಅವರ ಸಹಕಾರದೊಂದಿಗೆ ಹೆತ್ತೂರು ಕ್ರಸ್ಟರ್ ನ
ಅತ್ತಿಹಳ್ಳಿ, ಬಾಚಿಹಳ್ಳಿ, ಹಾಡ್ಯ, ಹಾಡ್ಲಹಳ್ಳಿ, ಹೊಂಗಡಹಳ್ಳ , ಬ್ಯಾಗಡಹಳ್ಳಿ, ಕುಂಬಾರಗೆರೆ, ಯಡಕೆರೆ ಹಾಗೂ ವನಗುರು ಕ್ರಸ್ಟರ್ ನ ವನಗುರು , ಮಂಕನಹಳ್ಳಿ, ಗೊದ್ದು, ತಂಬಲಗೆರೆ, ಹುಲಗತ್ತೂರು , ಆಡ್ರಳ್ಳಿಯ ಸರ್ಕಾರಿ ಪ್ರಾಥಮಿಕ ಹಿರಿಯ ಪಾಠ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ಕೊಡುವ ಮೂಲಕ ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡುವ ಕೆಲಸ ಮಾಡಲಾಯಿತು.
ಈ ಸಂದರ್ಭದಲ್ಲಿ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ತೀರ್ಥಾನಂದ(ಕೀರ್ತಿ) ಮಾತನಾಡಿ “ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಪ್ರೋತ್ಸಾಹ ಹಾಗೂ ಅವರ ಓದಿಗೆ ಸಹಾಯವಾಗಲೆಂದು ನಮ್ಮ ಟ್ರಸ್ಟ್ ವತಿಯಿಂದ ಈ ರೀತಿಯ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ. ಸರ್ಕಾರಿ ಶಾಲೆಯಲ್ಲಿ ಕಲಿಯುವುದರ ಜೊತೆಗೆ ಅತಿ ಹೆಚ್ಚು ಅಂಕಗಳು ಗಳಿಸಿ ಮಾದರಿ ವಿದ್ಯಾರ್ಥಿಗಳ ಆಗಬೇಕೆಂದು ಆಶಿಸುತ್ತೇವೆ. ಅಲ್ಲದೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಯಾವುದೇ ಸಹಾಯ ಬೇಕಾದಲ್ಲಿ ನಮ್ಮ ಜ್ಞಾನ ಸಮೃದ್ಧಿ ಚಾಲ್ ಟೇಬಲ್ ಟ್ರಸ್ಟ್ ನ್ನು ಸಂಪರ್ಕಿಸಬವುದು.”ಎಂದು ತಿಳಿಸಿದರು.
ದಾನಿಗಳೊಂದಿಗೆ ಸೇರಿ ತಾಲೂಕಿನದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನಗಳನ್ನು ಹಂಚುವ ಕೆಲಸ ಮಾಡಲು ಮುಂದಾಗಿರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ) ಸಕಲೇಶಪುರ ಘಟಕದ ಅಧ್ಯಕ್ಷರಾದ ಕರಡಿಗಾಲ ಅರುಣ್ ಗೌಡ ಹಾಗೂ ಪದಾಧಿಕಾರಿಗಳು ಹಾಗೂ ದಾನಿಗಳಾದ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ತೀರ್ಥಾನಂದ(ಕೀರ್ತಿ) ಹಾಗೂ ಇಂತಹ ಒಳ್ಳೆ ಕೆಲಸಕ್ಕೆ ಮಾರ್ಗದರ್ಶಕರಾಗಿ ಬೆನ್ನೆಲುಬಾಗಿ ನಿಂತಿರುವ ನಿವೃತ್ತ ಶಿಕ್ಷಕರಾದ ಕೆ.ಏನ್ ರಾಜು ಕರಡಿಗಾಲ ಅವರ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿ ಶಾಲೆಯಲ್ಲೂ ಶಿಕ್ಷಕರು ಹಾಗೂ SDMC ಆಡಳಿತ ಮಂಡಳಿಯಿಂದ ಹಾಗೂ ಪೋಷಕರಿಂದ, ಹಾಗೂ ತಾಲೂಕು ಶಿಕ್ಷಣ ಇಲಾಖೆಯವರಿಂದ ಮತ್ತು ಮಕ್ಕಳಿಂದ ಈ ಸೇವೆಗೆ ವ್ಯಾಪಕ ಪ್ರಸಂಶೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಕೆ . ಏನ್ ರಾಜು ಕರಡಿಗಾಲ, ವಳಲಹಳ್ಳಿ SDMC ಮಾಜಿ ಅಧ್ಯಕ್ಷರು ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕ ಕಾರ್ಯದರ್ಶಿ ನಾಗೇಶ್ ಕೆರೆಮನೆ, ಜಯರಾಜ್ ಚಂಗಡಹಳ್ಳಿ , ಶಿರಡಿ ಘಾಟ್ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧಯಕ್ಷರಾಗಿರುವ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದ ಪ್ರಜ್ವಲ್ ಚಿನ್ನಹಳ್ಳಿ ಇದ್ದರು.