ವಿಭಿನ್ನತೆಯಲ್ಲಿ ವಿಶಿಷ್ಟತೆ ಕಂಡ ಸೋಬಾನೆ ಪದಗಳ ತರಬೇತಿ : ಪ್ರತಿಮಾ ಟ್ರಸ್ಟ್

ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ. 
ಹಳೆಯ ಬೇರು ಹೊಸ ಚಿಗುರು "ವಿಭಿನ್ನತೆಯಲ್ಲಿ ವಿಶಿಷ್ಟತೆ ಕಂಡ ಸೋಬಾನೆ ಪದಗಳ ತರಬೇತಿ".ಇತ್ತೀಚಿನ ದಿನಗಳಲ್ಲಿ ನಮ್ಮ ಜನಪದ ಪ್ರಕಾರಗಳಲ್ಲಿ ಒಂದಾದ ಸೋಬಾನೆ ಪದ ಮಕ್ಕಳಿಗೆ ಪರಿಚಯವೆ ಆಗದಿರುವುದು ವಿಪರಿಯಾಸ ಇಂತಹ ಸಂದರ್ಭದಲ್ಲಿ ಪ್ರತಿಮಾ ಟ್ರಸ್ಟ್ ಸೋಬಾನೆ ಪದಗಳನ್ನು ಪರಿಚಯ ಮಾಡಬೇಕು ಎಂಬ ದೃಷ್ಟಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಒಂದು ತಿಂಗಳ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಲಾತ್ತು. 
ಶಿವಶಂಕರ ನಿನಾಸಂ. ರಂಗ ನಿರ್ದೇಶಕರು ಚನ್ನರಾಯಪಟ್ಟಣ. ಇವರು ಶಿಬಿರಗಳನ್ನು ಉದ್ಘಾಟನೆ ಮಾಡಿ, ಪ್ರಸ್ತುತ ದಿನಗಳಲ್ಲಿ ಇಂತಹ ಶಿಬಿರಗಳು ತುಂಬಾ ಅಪರೂಪ ಪ್ರತಿಮಾ ಟ್ರಸ್ಟ್ ಇಂತಹ ತರಬೇತ ಆಯೋಜನೆ ಮಾಡಿ ನಾನು ಉದ್ಘಾಟನೆ ಮಾಡಿದ್ದು ಖುಷಿ ತಂದಿದೆ ಸಾಂಸ್ಕೃತಿಕವಾಗಿ ಹೆಚ್ಚು ತೊಡಗಿಸಿಕೊಂಡಾಗ ಇನ್ನಷ್ಟು ಹೆಚ್ಚು ಹೆಚ್ಚು ಕೆಲಸ ಮಾಡಲು ಸಕ್ತರಾಗುತ್ತೀರಾ. ನಮ್ಮ ಜನಪದರು ಇಂತಹ ಹಳೆಯ ಸೋಬಾನೆ ಪದ ಹಾಡುವ ಇಂತಹ ಹಿರಿಯರು ನಮ್ಮ ದೊಡ್ಡ ಆಸ್ತಿ ಅವರೆ ಒಂದು ದೊಡ್ಡ ವಿಶ್ವ ಕೋಶ‌. ಅವರಿಂದ ಕಲಿಯುವುದು ಬಹಳಷ್ಟು ಇದೆ ಅದ್ದರಿಂದ ನಮ್ಮ ಹಿರಿಯರ ಜೊತೆಗೆ ಸಮಯ ಕಳೆಯಬೇಕು ಎಂದರು.ಮುಖ್ಯ ಅತಿಥಿಗಳಾದ ಮಂಜುನಾಥ್ ವಿಸ್ತರಣಾಧಿರಿ ಇವರು ಮಾತನಾಡಿ ಇವತ್ತಿನ ಮಕ್ಕಳಿಗೆ ಓದು ಬರಹ ಶಾಲೆ ಹಾಸ್ಟೆಲ್ ಜೊತೆಗೆ ಮೊಬೈಲೇ ಆಗಿದೆ. 
ಓದು ಬರಹ ಶಾಲೆ ಹಾಸ್ಟೆಲ್ ಎಲ್ಲಾ ಬೇಕು ಆದರೆ ಮೊಬೈಲ್ ಬೇಡ ಅದನ್ನು ಬಿಟ್ಟು ಇಂತಹ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದರು. ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಮೇಶ್ ತೆಂಕನಹಳ್ಳಿ ಮಾತನಾಡಿ ನಮ್ಮ ಟ್ರಸ್ಟ್ ಬಹಳಷ್ಟು ತರಬೇತಿ ಶಿಬಿರಗಳ ಆಯೋಜನೆ ಮಾಡುತ್ತಿದ್ದು ಈ ಬಾರಿಯ ಈ ಸೋಬಾನೆ ಪದಗಳ ತರಬೇತಿ ಶಿಬಿರ ಬಹಳ ವಿಶೇಷ. ಬಹಳ ದಿನಗಳಿಂದ ಈ ಸೋಬಾನೆ ಪದಗಳ ತರಬೇತಿ ಶಿಬಿರ ಆಯೋಜನೆ ಮಾಡಬೇಕು ಅಂದುಕೊಂಡರೂ ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ.
 ಅದರಲ್ಲೂ ನಮ್ಮ ಹಳ್ಳಿ ಹಿರಿಯ ಸೋಬಾನೆ ಪದಗಳನ್ನು ಹೇಳಲು ಬಂದೊರು ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿರುವ ತಿಮ್ಮಮ್ಮ. ವಳಗೆರ ಸೋಮನಹಳ್ಳಿ. ಅಕ್ಕಮ್ಮ. ಹೊಂಬಾಳೆಕೊಪ್ಪಲು ಹೊಸೂರು. ಮಂಜಮ್ಮ. ವಳಗೆರ ಸೋಮನಹಳ್ಳಿ. ಪಟ್ಟಮ್ಮ. ವಳಗೆರ ಸೋಮನಹಳ್ಳಿ. ಇಂತಹ ಹಿರಿಯ ಜ್ಞಾನಿಗಳು ಕಲಿಸಲು ಬಂದಿರುವುದು ನಮ್ಮ ನಿಮ್ಮ ಭಾಗ್ಯ.ಎಲ್ಲಾ ಶಿಬಿರಾರ್ಥಿಗಳು ಸದುಪಯೋಗ ಪಡೆದುಕೊಳ್ಳಿ. ಎಂದರು. ಕಾರ್ಯಕ್ರಮದಲ್ಲಿ ಪ್ರತಿಮಾ ಟ್ರಸ್ಟ್ ಸಂಚಾಲಕರಾದ ಎ.ಎಲ್ ನಾಗೇಶ್ ಕಾರ್ಯದರ್ಶಿಗಳಾದ ಡಿ.ಜಗದದೀಶ್ ಚಂದ್ರ, ಹಾಸ್ಟೆಲ್ ಮೇಲ್ ವಿಚಾರ ವಿಚಾರಕರಾದ, ಆಶಾ ರಾಣಿ, ಪ್ರತಿಭಾ. ಮತ್ತು ಹಾಸ್ಟೆಲ್‌ನ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Post a Comment

Previous Post Next Post