ಬಿಕ್ಕೋಡು ಹೋ. ಹೆಮ್ಮಡಿಗನಹಳ್ಳಿ ಗ್ರಾಮದ ಮಹಿಳೆ ಕಾಣೆ


ಬೇಲೂರು ತಾ. ಬಿಕ್ಕೋಡು ಹೋ. ಹೆಮ್ಮಡಿಗನಹಳ್ಳಿ ಗ್ರಾಮದ ಭಾಗ್ಯ ಕೋಂ ವಿರೂಪಾಕ್ಷರವರ ಮಗಳಾದ ರೇಷ್ಮಾರವರು ಹಾಸನದಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರತಿನಿತ್ಯದಂತೆ ಕಾಲೇಜಿಗೆ ಹೋಗಿಬರುತ್ತೇನೆಂದು ದಿನಾಂಕ:28/06/2023 ರಂದು ಬೆಳಿಗ್ಗೆ ಸುಮಾರು 06:15 ಗಂಟೆೆ ಸಮಯದಲ್ಲಿ ಮನೆಯಿಂದ ಹೋದವಳು ಇದೂವರೆವಿಗೂ ಮನೆಗೆ ಬಾರದೇ ಇದ್ದು, ಆಕೆಯು ಉಪಯೋಗಿಸುತ್ತಿರುವ ಮೊಬೈಲ್ ನಂಬರ್ ಸ್ವಿಚ್‌ಆಫ್ ಆಗಿದ್ದು, ಪತ್ತೆಮಾಡಿಕೊಡಬೇಕೆಂದು ಭಾಗ್ಯರವರು ಅರೇಹಳ್ಳಿ ಪೊಲೀಸ್ ಠಾಣೆಗೆ ದಿ:02/07/2023 ರಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ. 

ಕಾಣೆಯಾದವರ ಚಹರೆ ಗುರುತು:ರೇಶ್ಮಾ, 20ವರ್ಷ, 5,1 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಬಲ್ಲವಳಾಗಿದ್ದು, ಮನೆಯಿಂದ ಹೋಗುವಾಗ ನೇರಳೆ ಬಣ್ಣದ ಟಾಪ್ ಮತ್ತು ನೀಲಿಬಣ್ಣದ ಪ್ಯಾಂಟ್ ಧರಿಸಿದ್ದು, ಸುಳಿವು ಸಿಕ್ಕಲ್ಲಿ ದೂರವಾಣಿ ಸಂಖ್ಯೆಗೆ ಸಂಪರ್ಕಿಸುವುದು.

Post a Comment

Previous Post Next Post