ರಸ್ತೆಯ ಗುಂಡಿಯನ್ನು ನೆಗೆಸಿದ್ದರಿಂದ ಬೈಕ್‌ನಿಂದ ಬಿದ್ದು ಸಾವು


 ಬಳ್ಳಾರಿ ಜಿಲ್ಲೆ. ಸಂಡೂರು ತಾಲ್ಲೂಕು, ವಡ್ಡರಹಳ್ಳಿ ಗ್ರಾಮದ ವಾಸಿಯಾದ ಚಿನ್ನಪ್ಪ ಬಿನ್ ಲೇ.ತಿಮ್ಮಯ್ಯರವರ ಮಗನಾದ 21 ವರ್ಷ ವಯಸ್ಸಿನ ತಿಮ್ಮೇಶರವರು ಕಬ್ಬುಕಡಿಯುವ ಕೆಲಸಕ್ಕೆ ಬಂದು ಚನ್ನರಾಯಪಟ್ಟಣ ತಾ. ಗೋವಿನಕೆರೆಯಲ್ಲಿ ಟೆಂಟ್ ಹಾಕಿಕೊಂಡು ಕಬ್ಬುಕಡಿಯುವ ಕೆಲಸ ಮಾಡಿಕೊಂಡಿದ್ದು, ದಿನಾಂಕ:01/07/2023 ರಂದು ಸಂಜೆ ಸುಮಾರು 06:24 ಗಂಟೆ ಸಮಯದಲ್ಲಿ ತಿಮ್ಮೇಶರವರು ತನ್ನ ಬಾಬ್ತು ಕೆಎ35-ಈ.ಎನ್4724 ಸಂಖ್ಯೆಯ ಹೊಂಡಾಶೈನ್ ಬೈಕ್‌ನ್ನು ಓಡಿಸಿಕೊಂಡು ಚನ್ನರಾಯಪಟ್ಟಣ ಸಂತೆಗೆ ಬಂದು ಸಾಮಾನು ತೆಗೆದುಕೊಂಡು ವಾಪಸ್ ಗೋವಿನಕೆರೆಗೆ ಹೋಗಲು ಚನ್ನರಾಯಪಟ್ಟಣ-ಬೆಂಗಳೂರು ಎನ್.ಹೆಚ್75 ರಸ್ತೆಯ ಮಂತ್ರಿಮಹಲ್ ಹೊಟೆಲ್ ಬೈಪಾಸ್‌ನಲ್ಲಿ ತನ್ನ ಬೈಕ್‌ನ್ನು ದುಡಿಕಿನಿಂದ ಮತ್ತು ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ರಸ್ತೆಯ ಪಕ್ಕದ ಗುಂಡಿಯನ್ನು ನೆಗೆಸಿದ ಪರಿಣಾಮ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದ ತಿಮ್ಮೇಶ ರವರ ತಲೆಗೆ ಹಾಗು ಕಿವಿಗೆ ಪೆಟ್ಟು ಬಿದ್ದು, ರಕ್ತಗಾಯಗಳಾಗಿದ್ದವರನ್ನು ಪರೀಕ್ಷಿಸಿದ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಮೃತರ ತಂದೆ ಚಿನ್ನಪ್ಪರವರು ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.

Post a Comment

Previous Post Next Post