ಅರಸೀಕೆರೆ ನಗರಸಭೆ ವತಿಯಿಂದ ಇಂದು ಎಲ್ಲಾ ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ ಚೀಲ,, ಪ್ಯಾಕಿಂಗ್ ಚೀಲ, ತಟ್ಟೆ, ಪ್ಲಾಸ್ಟಿಕ್ ನಿಂದ ತಯಾರಿಸಿದ ವಸ್ತುಗಳನ್ನು ಮಾರುವುದು ಹಾಗೂ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಹಾಗೇನಾದರೂ ಅಂಗಡಿ ಮಾಲೀಕರು ಪ್ಲಾಸ್ಟಿಕ್ ವಸ್ತುಗಳನ್ನು ಮಾರಿದರೆ ಗ್ರಾಹಕರಿಗೆ ನೀಡಿದರೆ ಅಂತಹ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಟೋ ಅನೌನ್ಸ್ಮೆಂಟ್ ಮೂಲಕ ತಿಳಿಸಲಾಯಿತು.
ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ ನಿಂದ ತಯಾರಿಸಿದ ವಸ್ತುಗಳನ್ನು ಗ್ರಾಹಕರಿಗೆ ನೀಡಬಾರದು ಹಾಗೂ ಗ್ರಾಹಕರಿಗೆ ಮನೆಯಿಂದಲೇ ಅಂಗಡಿಗಳಿಗೆ ಬರುವಾಗ ಬಟ್ಟೆಯಿಂದ ತಯಾರಿಸಿದ ಬ್ಯಾಗ್ ಗಳನ್ನು ತರವಂತೆ ತಿಳಿಸಬೇಕು ಎಂದರು ಹಾಗೂ ಅಂಗಡಿಗಳಿಗೆ ನಮ್ಮ ಅಂಗಡಿಯಲ್ಲಿ ಪ್ಲಾಸ್ಟಿಕ್ ನಿಷೇಧ ಎನ್ನುವ ಚೀಟಿ ಅಂಟಿಸಿ ಎಲ್ಲಾ ಅಂಗಡಿ ಮಾಲೀಕರಿಗೆ ನಗರ ಸಭೆ ವತಿಯಿಂದ ಅಂಗಡಿ ಲೈಸೆನ್ಸ್ ಪಡೆದುಕೊಳ್ಳುವಂತೆ ತಿಳಿಸಿ ಸ್ವಚ್ಛ ಸುಂದರ ತಾಜ್ಯ ಮತ್ತು ಪ್ಲಾಸ್ಟಿಕ್ ರಹಿತ ಅರಸೀಕೆರೆ ಕಾಣಲು ಎಲ್ಲಾ ನಾಗರಿಕರು ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಾಯ ಪಾಲಕರು ಪರಿಸರ ರವಿಕುಮಾರ್ ,, ನಗರಸಭೆ ಸಿಬ್ಬಂದಿಗಳಾದ ರೇವಣಸಿದ್ದಪ್ಪ ,ಜಮೀಲ್,ಕಲಾವತಿ, ಅನಿತಾ, ಪುಷ್ಪಲತಾ, ಸರೋಜಮ್ಮ ,ಉಪಸ್ಥಿತಿ ಇದ್ದರು