ಮಹಾನ್ ದಾರ್ಶನಿಕರ ಮಾರ್ಗದರ್ಶನವೇ ಸಂದೇಶ: ಕೆ.ಎಂ.ಶಿವಲಿಂಗೇಗೌಡ

ಅರಸೀಕೆರೆ :  ಬುದ್ದ, ಬಸವ, ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದರ್ಶನದೊಂದಿಗೆ  ಕ್ಷೇತ್ರದ ಅಭಿವೃದ್ದಿಯನ್ನು ಮಾಡಿದ್ದೇ. ಈ ಮಹಾನ್ ದಾರ್ಶನಿಕರು ಹಾಕಿಕೊಟ್ಟ ಸಂದೇಶಗಳೇ ನನ್ನ ರಾಜಕೀಯ ಸೇವೆಗೆ ದೃಷ್ಟಿಕೋನಗಳಾಗಿವೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದ ಹಾಸನ ರಸ್ತೆ ಡಾ. ಅಂಬೇಡ್ಕರ್ ನಗರದ ಮುನೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ದ್ರಾವಿಡ ಮೈತ್ರಿ ಮಹಾಸಭಾ, ತಾಲ್ಲೂಕು ಆದಿ ದ್ರಾವಿಡ ಸಮಾಜ, ಮಹಿಳಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ  ಸನ್ಮಾನ ಸಮಾರಂಭ ಮತ್ತು ನೋಟ್ ಬುಕ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಸ್ಪಶ್ಯತೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಅಂಬೇಡ್ಕರ್‌ರವರ ಹೋರಾಟ ಇಂದು ಎಲ್ಲರಿಗೂ ಸಮಾನವಾದ ಹಕ್ಕು ದೊರೆಯಲು ಸಾದ್ಯವಾಗಿವೆ. ದ್ರಾವಿಡರು ಶಕ್ತಿವಂತರು ಇವರು ಇತಿಹಾಸದಿಂದಲೂ ಹಿಡಿದ  ಕಾರ್ಯವನ್ನು ಯಶಸ್ಸಿನಡೆಗೆ ಸಾಗುವಂತೆ ಮಾಡುತ್ತಾರೆ. ಸಾಮಾಜಿಕ ಪರಿವರ್ತನೆಯ ಕಾಲದಲ್ಲಿ ಶೈಕ್ಷಣಿಕ ಹಕ್ಕು ಸಹ ದೊರೆತಿದೆ. ಸಮಾಜದಲ್ಲಿ ಎಲ್ಲರೂ ಕೂಡ ಸಮಾನತೆಯಿಂದ ಬಾಳವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ಪಕ್ಷ ೫ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು,  ಎಲ್ಲಾ ಫಲಾನುಭವಿಗಳು ಇದರ ಲಾಭವನ್ನು ಪಡೆದುಕೊಳ್ಳಲು ಮುಂದಾಗಬೇಕು.  ರಾಜ್ಯದ ಜನತೆ ನಂಬಿಕೆ ಇಟ್ಟು ನೀಡಿರುವ ಆಡಳಿತವು ತಕ್ಕ ಅಭಿವೃದ್ದಿ ಕೆಲಸಗಳನ್ನು ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರವು ಮಾಡಲಿದೆ. ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಗೆಲುವನ್ನು ಪಡೆಯಲು ಆಶೀರ್ವಧಿಸಿದ ನಿಮ್ಮೇಲ್ಲರ ಋಣ ತೀರಿಸಲು ಪ್ರಮಾಣಿಕವಾಗಿ ನಾಣು ಬದ್ದನಾಗಿದ್ದೇನೆ ಎಂದರು.

ಕಾಂಗ್ರೆಸ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಟೇಲ್‌ಶಿವಪ್ಪ ಮಾತನಾಡಿ, ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ರಾಜ್ಯಮಟ್ಟದ ಸ್ಥಾನಗಳನ್ನು ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಸಕ್ತರಿದ್ದಾರೆ. ರಾಜಕೀಯ ಬೆಳವಣಿಗೆ ಮತ್ತು ಸದನದ ಸಭೆಯ ಒತ್ತಡಗಳಿಂದ ಸ್ವಲ್ಪ ವಿಳಂಬವಾಗಿದೆ.  ರಾಜ್ಯದ ಜನತೆಯ ಪರವಾಗಿ ಕಾಂಗ್ರೇಸ್ ಕಾರ್ಯನಿರ್ವಹಿಸುತ್ತಿದೆ. ಶಾಸಕರು ಕಾರ್ಯಕರ್ತರಿಗೆ ವಿಕೇಂದ್ರಿಕರಣ ರೀತಿ ಜನರಿಗೆ ಆಡಳಿತವನ್ನು ನೀಡಲಿದ್ದಾರೆ. ಜಿಲ್ಲೆಯ ನಾಯಕತ್ವ ಇವರಿಗೆ ದೊರಕಿದ್ದು ಉತ್ತಮ ಆಡಳಿತ ನಡೆಸಲಿದ್ದಾರೆ ಎಂಬ ಭರವಸೆ ನಮಗಿದೆ ಎಂದರು.

ಸಮಾಜ ಸೇವಕ ಹರೀಶ್ ಮಾತನಾಡಿ, ಶಾಸಕರು ಬುದ್ದ, ಬಸವ, ಅಂಬೇಡ್ಕರ್ ಅವರುಗಳ ಆದರ್ಶದಂತೆ ಕ್ಷೇತ್ರವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿ, ಸಮಾನತೆಯ ಹರಿಕಾರರಾಗಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯದಂತೆ ಆಡಳಿತವನ್ನು ನೀಡಿದಲ್ಲಿ ರಾಜಕೀಯ ಕ್ಷೇತ್ರಕ್ಕೆ ತನ್ನದೇ ಮಹತ್ವವು ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಜೆ.ಪಿ. ಜಯಣ್ಣ, ಪುರಸಭೆ ಮಾಜಿ ಅಧ್ಯಕ್ಷ ಕೆ.ಸಿ. ಯೋಗೀಶ್, ಧರ್ಮಶೇಖರ್, ವೆಂಕಟೇಶ್, ನಗರಸಭಾ ಸದಸ್ಯ ಮನೋಹರ್, ವೇಲ್‌ರಾಜ್, ಕೆಜೆಪಿ ಮಂಜು, ಆನಂದ್, ಮಂಜುನಾಥ್, ಸುಬ್ರಹ್ಮಣ್ಯ, ವಿನೋದ್‌ಕುಟ್ಟಿ, ಅಣ್ಣಾದೊರೈ, ಬಾಲಮುರುಗನ್, ಸುಧಾಕರ್, ಜಗದೀಶ್ ಇನ್ನಿತರರು ಉಪಸ್ಥಿತರಿದ್ದರು.

ಫೊಟೋ-೨

ಅರಸೀಕೆರೆ ನಗರದಲ್ಲಿ  ದ್ರಾವಿಡ ಮೈತ್ರಿ ಮಹಾಸಭಾ ವತಿಯಿಂದ ೪ನೇ ಬಾರಿ ಶಾಸಕರಾಗಿ ಆಯ್ಕೆಯಾದ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಸನ್ಮಾನಿಸಲಾಯಿತು.

Post a Comment

Previous Post Next Post