ಹಾಸನ: ಹಾಸನದ ರೋಟರಿ ಕ್ಲಬ್ ಗಳಲ್ಲಿಯೇ ಪ್ರತಿಷ್ಠಿತ ಹಾಗೂ ಹಳೆಯ ರೋಟರಿ ಕ್ಲಬ್ ಆಗಿರುವ ರೋಟರಿ ಕ್ಲಬ್ ಆಫ್ ಹಾಸನ್ ಸಂಸ್ಥೆಯ 70ನೇ ಅಧ್ಯಕ್ಷರಾಗಿ ರೂ. ಗಿರೀಶ್ ಅಡವಿಗೌಡ ಪದಗ್ರಹಣ ಹೊಂದಿದರು.
ನಗರದ ನಂದಗೋಕುಲ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಹಿಂದಿನ ಅಧ್ಯಕ್ಷರಾದ ರೊ. ಲೋಕೇಶ್ ತಮ್ಮ ಒಂದು ವರ್ಷದ ಸಾರ್ಥಕ ಸೇವೆಯಿಂದ ಕ್ಲಬ್ ಅನ್ನು ಮುನ್ನಡೆಸಿ, ಜವಾಬ್ದಾರಿಯನ್ನು ಅಡವಿಗೌಡ ಅವರಿಗೆ ಹಸ್ತಾಂತರಿಸಿದರು. ಇದೆ ವೇಳೆ ರೊ.ಶ್ರೀನಾಥ್ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡರು.
![]() |
ಹೊಯ್ಸಳ ಪಥ ಕನ್ನಡ ದಿನ ಪತ್ರಿಕೆ ಓದಿಗಾಗಿ ಕ್ಲಿಕ್ ಮಾಡಿ |
ಕಾರ್ಯಕ್ರಮದಲ್ಲಿ ಅನುಷ್ಠಾಪನಾ ಅಧಿಕಾರಿಯಾಗಿ ಪಾಸ್ಟ್ ಡಿಸ್ಟಿಕ್ ಗೌರ್ನರ್ ರೊ. ಬಿ ಎಸ್ ರವಿ ಉಪಸ್ಥಿತರಿದ್ದರು. ಅಸಿಸ್ಟೆಂಟ್ ಗವರ್ನರ್ ಪದ್ಮನಾಭ, ಜೋನಲ್ ಲಿಫ್ಟಿನೆಂಟ್ ಕ್ಯಾಪ್ಟನ್ ಜಯರಾಮ್ ಹಾಗೂ ಇನ್ನಿತರರು ವೇದಿಕೆ ಉಪಸ್ಥಿತರಿದ್ದರು.
Tags
ಹಾಸನ