ಆಲೂರಿನಲ್ಲಿ ಪುಂಡ ಯುವಕರ ಗುಂಪೊಂದು‌ ಹಾಸ್ಟಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಆಲೂರು : ಪುಂಡರ ಗುಂಪೊಂದು ಏಕಾಏಕಿ ಹಾಸ್ಟೆಲ್ ಗೆ ನುಗ್ಗಿ ಹಾಸ್ಟೆಲ್ ನಲ್ಲಿದ್ದ ಪರಿಕರಗಳನ್ನು ಮುರಿದು ಹಾಕಿದ್ದು ವಿದ್ಯಾರ್ಥಿಗಳು ಮೇಲೆ ಹಲ್ಲೆ ನಡೆಸಿರುವ ಘಟನೆ ಆಲೂರು ಪಟ್ಟಣದಲ್ಲಿ ನಡೆದಿದೆ.


ಮಂಗಳವಾರ ಸಂಜೆ 5.30 ಘಂಟೆ ಸುಮಾರಿಗೆ ಆಲೂರು ಪಟ್ಟಣದ ಕೊನೆ ಪೇಟೆಯ ವೀರಶೈವ ಕಲ್ಯಾಣ ಮಂಟಪದ ಬಳಿಯಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಆಲೂರು ಪಟ್ಟಣದ ಸಂಜು,ಸಚ್ಚಿನ್, ಬೈರಾಪುರ ಗ್ರಾಮದ ಅರ್ಜುನ್, ಸಂಜಯ್,ಮೂಡ್ನಹಳ್ಳಿ ಗ್ರಾಮದ ರೂಪೇಶ್,ಸೇರಿ ಐವರ ಪುಂಡರ ಗುಂಪೊಂದು ಕೈಯಲ್ಲಿ ಕ್ರಿಕೆಟ್‌ ಬ್ಯಾಟ್,ರಾಡು ಹಾಗೂ ಮಾರಕಾಸ್ತ್ರಗಳನ್ನು ಹಿಡಿದು ಏಕಾಏಕಿ ಹಾಸ್ಟೆಲ್ ಗೆ ನುಗ್ಗಿ ಹಾಸ್ಟೆಲ್ ನಲ್ಲಿದ್ದ ಚೇರ್,ಟೇಬಲ್ ಹಾಗೂ ಇತರ ಶಾಲಾ ಪರಿಕರಗಳನ್ನು ಮುರಿದು ಕೆಲವು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದು ಸಣ್ಣಪುಟ್ಟ ಗಾಯಗೊಳಸಿ ಬೆದರಿಕೆ ಹಾಕಿದ್ದಾರೆ ಸಣ್ಣಪುಟ್ಟ ಗಾಯಗಳಾಗಿದ್ದ ವಿದ್ಯಾರ್ಥಿಗಳಿಗೆ ಆಲೂರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸಿದ್ದಾರೆ ಈ ಸಂಬಂಧ ಹಾಸ್ಟೆಲ್ ವಾರ್ಡನ್ ಆನಂದ ಆಲೂರು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ ತಕ್ಷಣ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಹಾಸ್ಟೆಲ್ ಗೆ ಬೇಟಿ ನೀಡಿ ಸಿ.ಸಿ.ಟಿವಿ ಪರಿಶೀಲಿಸಿ ಹಲ್ಲೆಗೆ ಕಾರಣರಾದ ಪುಂಡರನ್ನು ಬಂದಿಸಿ ನ್ಯಾಯಂಗ ಬಂದನಕ್ಕೆ ಒಪ್ಪಿಸಿದ್ದಾರೆ.

ಹಾಸ್ಟೆಲ್ ಘಟನೆಗೂ ಮುನ್ನಾ ಆಲೂರು ಬಸ್ ಸ್ಟ್ಯಾಂಡ್ ನಲ್ಲಿ ಹುಡುಗರ ಜೊತೆ ಗಲಾಟೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದ್ದು ಈ ಪುಂಡರ ಗುಂಪು ದಿನನಿತ್ಯ ಒಂದಲ್ಲ ಒಂದು ಗಲಾಟೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಇಂತಹ ಪುಂಡಾ ಪೊಕರಿಗಳಿಗೆ ಪೋಲಿಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೆಲವು ಪುಂಡ ಯುವಕರು ಬಸ್ ನಿಲ್ದಾಣ ಸೇರಿ ಜನಸಂದಣಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಸಣ್ಣಪುಟ್ಟ ಗಲಾಟೆ ಮಾಡುತ್ತಾ ಜನರಲ್ಲಿ ಭಯ ಹುಟ್ಟಿಸಿ ಹವಾ ಪಡೆಯುತ್ತಿದ್ದಾರೆ ಇಂತಹವರ ಬಗ್ಗೆ ಹದ್ದಿನ ಕಣ್ಣು ಹಿಡುವಂತೆ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಗಂಗಾಧರ್ ತಿಳಿಸಿದ್ದಾರೆ.

Post a Comment

Previous Post Next Post