ಬೇಲೂರು. ವಿಶ್ವವಿಖ್ಯಾತ ಪ್ರವಾಸಿ ತಾಣ ಶಿಲ್ಪ ಕಲೆಗಳ ನಾಡಿನಲ್ಲಿ ಐತಿಹಾಸಿಕ ವಾರದ ಸಂತೆಗೆ ಇಲ್ಲ ಸೂಕ್ತ ಸ್ಥಳ ಮಳೆಗಾಲದಲ್ಲಿ ಕೆಸರು ಗದ್ದೆಯಲ್ಲಿ ಸಂತೆ ನಡೆದರೆ ಬೇಸಿಗೆಯಲ್ಲಿ ಕಸಾ ಧೂಳಿನಲ್ಲಿ ಸಂತೆ ನಡೆಸುವ ಪರಿಸ್ಥಿತಿ ನಿರ್ಮಾಣ ಕಳೆದ 10 -12 ವರ್ಷದಗಳ ಹಿಂದೆ ಬೇಲೂರು ಜೂನಿಯರ್ ಕಾಲೇಜ್ ಮೈದಾನದ ಹಿಂಭಾಗ ವಾರದ ಸಂತೆ ನಡೆಸಲಾಗುತ್ತಿತ್ತು ಹಲವು ಕಾರಣಗಳಿಂದ ವಾರದ ಸಂತೆ ಸ್ಥಳಾಂತರಗೊಂಡ ಕಾರಣ ಹಲವು ವರ್ಷಗಳ ಕಾಲ ಅಂಬೇಡ್ಕರ್ ವೃತ್ತದಿಂದ ಜೆ.ಪಿ ನಗರ ವೃತ್ತದ ಮೂಡಿಗೆರೆ ರಸ್ತೆ ಬದಿಯಲ್ಲಿ ವಾರದ ಸಂತೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು ಕಳೆದ 7-8 ವರ್ಷದಿಂದ
ಶ್ರೀ ಚನ್ನಕೇಶ್ವರ ಸ್ವಾಮಿ ದೇವಾಲಯದ ಹಿಂಭಾಗದ ರಸ್ತೆ ಬದಿಗಳಲ್ಲಿ ಮತ್ತು ದೇವಾಲಯಕ್ಕೆ ಸೇರಿದ ಜಾಗದಲ್ಲಿ ವಾರದ ಸಂತೆ ನಡೆಸುತ್ತಿದ್ದು ಪ್ರತಿ ಸೋಮವಾರ ದೇವಸ್ಥಾನದ ರಸ್ತೆಯಲ್ಲಿ ವಾಹನದಟ್ಟನೆ ಮತ್ತು ಜನಜಂಗುಳಿಯಿಂದ ಕೂಡಿರುತ್ತದೆ ಇದರಿಂದ ಬಸ್ ನಿಲ್ದಾಣದಿಂದ ದೇವಸ್ಥಾನದ ರಸ್ತೆ ಮತ್ತು ಜೆ.ಪಿ ನಗರ ವೃತ್ತದವರೆಗೂ ವಾಹನದಟ್ಟನೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಮತ್ತು ಪ್ರವಾಸಿಗರಿಗೆ ತೊಂದರೆ ಉಂಟಾಗುತ್ತಿದ್ದು ವಾಹನ ಪಾರ್ಕಿಂಗ್ ಮಾಡಲು ಪ್ರವಾಸಿಗರು ಹರಸಾಹಸ ಪಡಬೇಕಾಗಿದೆ ಇನ್ನು ಸಂತೆ ನಡೆಸುತ್ತಿರುವ ಸ್ಥಳ ದೇವಾಲಯದ ಜಾಗವಾದ ಕಾರಣ ಸಂತೆ ಮೈದಾನ ಅಭಿವೃದ್ಧಿಯಿಂದ ವಂಚಿತಗೊಂಡಿದೆ ಬೇಲೂರಿನ ವಾರದ ಸಂತೆ ಜಿಲ್ಲೆಯಲ್ಲಿಯೇ ಐತಿಹಾಸಿಕ ಹಿನ್ನೆಲೆ ಹೊಂದಿದ್ದು ಇಂದು ಸಂತೆ ವ್ಯಾಪಾರಕ್ಕೆ ಸೂಕ್ತ ಸ್ಥಳವಿಲ್ಲದೆ ವ್ಯಾಪಾರದ ಕಟ್ಟೆ ಕುಡಿಯುವ ನೀರು ಶೌಚಾಲಯ ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದೆ ವ್ಯಾಪಾರಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಮಳೆಗಾಲದಲ್ಲಿ ಸಂತೆ ಮೈದಾನ ಅಕ್ಷರಶಹ ಕೆಸರುಗದ್ದೆಯಾಗಿ ಸಂತೆಗೆ ಬರುವ ಸಾರ್ವಜನಿಕರು ಬಿದ್ದು ಎದ್ದು ಸಂತೆ ವ್ಯಾಪಾರ ಮಾಡಬೇಕಿದೆ ಇನ್ನು ಬೇಸಿಗೆಯಲ್ಲಿ ಧೂಳಿನಿಂದ ಕೂಡಿದ್ದು ಸಂತೆಗೆ ಹೋಗುವ ಮೈದಾನಕ್ಕೆ ಸೂಕ್ತ ರಸ್ತೆಗಳಿಲ್ಲದೆ ಅಪಘಾತಗಳು ಸಂಭವಿಸುತ್ತಿದೆ ಕೇವಲ ಸರ್ಕಾರ ಮತ್ತು ಜನಪ್ರತಿನಿಧಿಗಳು ಸ್ವಚ್ಛತೆ ಜಾಗೃತಿ ಆಂದೋಲನ ಕಾರ್ಯಕ್ರಮಗಳು ನೀಡಿದರೆ ಸಾಲದು ವಾರದ ಸಂತೆ ವ್ಯಾಪಾರಕ್ಕೆ ಸೂಕ್ತ ಸ್ಥಳ ನಿಗದಿ ಮಾಡಿ ವ್ಯಾಪಾರಕ್ಕೆ ಕಟ್ಟೆ ನಿರ್ಮಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಸ್ವಚ್ಛತೆ ಅನಿರ್ಮಲ್ಯತೆ ತಡೆಗಟ್ಟಿ ಆರೋಗ್ಯಕರವಾದ ಪರಿಸರ ಒದಗಿಸಬೇಕೆಂದು ವ್ಯಾಪಾರಸ್ಥರು ಆಗ್ರಹಿಸುತ್ತಿದ್ದಾರೆ.
ಇನ್ನಾದರೂ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರು ತಾಲೂಕು ಕೇಂದ್ರದ ಬೇಲೂರು ವಾರದ ಸಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವ್ಯಾಪಾರಸ್ಥರ ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ಸೂಕ್ತ ಸ್ಥಳ ನಿಗದಿ ಮಾಡಿ ಮೂಲಭೂತ ಸೌಕರ್ಯ ಒದಗಿಸಿದ್ದಾರೋ ಕಾದು ನೋಡಬೇಕಿದೆ.
Tags
ಬೇಲೂರು