ಬಸ್ ಸ್ಟಾಂಡ್ ಹತ್ತಿರ ನಿಲ್ಲಿಸಿದ್ದ ಮೋಟಾರು ಬೈಕ್ ಕಳವು.

 


ಹೊಳೇನರಸೀಪುರ ತಾ. ಕಸಬಾ ಹೋ. ಪಡುವಲಹಿಪ್ಪೆ ಗ್ರಾಮದ ವಾಸಿಯಾದ ದಿವಾಕರ ಬಿನ್ ನಾಗಣ್ಣ ರವರು ಪಡುವಲಹಿಪ್ಪೆ ಗ್ರಾಮದ ಬಸ್‌ಸ್ಟಾಂಡ್ ಹತ್ತಿರ ತಮ್ಮ ಬಾಬ್ತು ಕೆಎ13-ಇಇ8602 ಸಂಖ್ಯೆಯ ಸ್ಪೇಂಡರ್ ಪ್ಲಸ್ ಮೋಟಾರು ಬೈಕ್ ನ್ನು ನಿಲ್ಲಿಸಿ, ಗ್ರಾಮದ ದಿಲೀಪರವರ ಮನೆಗೆ ಊಟಕ್ಕೆ ಹೋಗಿ ಊಟ ಮಾಡಿಕೊಂಡು ರಾತ್ರಿ ಸುಮಾರು 10:30 ಗಂಟೆ ಸಮಯದಲ್ಲಿ ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ ಮೋಟಾರು ಬೈಕ್ ಇಲ್ಲದೇ ಇದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದುದ್ದರಿಂದ ಅಂದಾಜು 15,000/- ಬೆಲೆಬಾಳುವ ಮೋಟಾರು ಬೈಕ್‌ನ್ನು ಪತ್ತೆಮಾಡಿಕೊಡಬೇಕೆಂದು ಹೊಳೇನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.

Post a Comment

Previous Post Next Post