ಹಾಸನ: ನಗರದ ರಿಂಗ್ ರಸ್ತೆ, ತನ್ವೀತ್ರಿಶಾ ಕಲ್ಯಾಣ ಮಂಟಪದ ಬಳಿ ಇರುವ ಕರಿಬೀರೇಶ್ವರ ಟೈಲ್ಸ್ ಮತ್ತು ಹಾರ್ಡ್‌ವೇರ‍್ಸ್ ಆವರಣದಲ್ಲಿ ಶ್ರೀ ವಿನಯ್ ಗುರೂಜಿಯವರ ಹುಟ್ಟುಹಬ್ಬವನ್ನು ಆಗಸ್ಟ್ ೨೦ರ ಭಾನುವಾರದಂದು ಬೆಳಿಗ್ಗೆ ೧೦ ಗಂಟೆಗೆ ಆಚರಿಸಲಾಗುತ್ತಿದ್ದು, ಈ ವೇಳೆ ಉಚಿತ ಆರೋಗ್ಯ ಮೇಳವನ್ನು ಹಮ್ಮಿಕೊಂಡಿರುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಇದೆ ಭಾನುವಾರದಂದು ಹಮ್ಮಿಕೊಳ್ಳಲಾಗಿರುವ ಶ್ರೀ ವಿನಯ್ ಗುರೂಜಿಯವರ ಜನ್ಮದಿನವನ್ನು ಕರ್ನಾಟಕ ಸರಕಾರದ ಪರಿಸರ ರಾಯಬಾರಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನೆರವೇರಿಸುವರು. ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್ ಗೌಡ, ಮಾಜಿ ಶಾಸಕ ಪ್ರೀತಮ್ ಜೆ. ಗೌಡ, ಜೆಡಿಎಸ್ ಮುಖಂಡರಾದ ಭವಾನಿ ರೇವಣ್ಣ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಎಸ್ಪಿ ಹರಿರಾಂ ಶಂಕರ್, ಜಿಲ್ಲಾ ಪಂಚಾಯತ್ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಡಿ.ಆರ್. ಪೂರ್ಣಿಮ, ಉಪವಿಭಾಗಧಿಕಾರಿ ಮಾರುತಿಗೌಡ, ಕಿರುತೆರೆ ನಟ ಮಾಸ್ಟರ್ ಆನಂದ್, ವಾಣೀಜ್ಯ ತೆರಿಗೆ ಉಪ ಆಯುಕ್ತ ಚನ್ನಕೇಶವ, ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಇತರರು ಪಾಲ್ಗೊಳ್ಳಲ್ಲಿದ್ದಾರೆ ಎಂದರು. ಈ ಕಾರ್ಯಕ್ರಮದ ಆಯೋಜಕರಾಗಿ ವಿನಯ್ ಗುರೂಜಿ ಸೇವಾ ಬಳಗ, ಶ್ರೀ ಕರೀಬೀರೇಶ್ವರ ಟೈಲ್ಸ್ ಮತ್ತು ಹಾರ್ಡ್‌ವೇರ್ ಗೆಳೆಯರ ಬಳಗ ಚಿಕ್ಕಹೊನ್ನೇನಹಳ್ಳಿ, ಶ್ರೀಮಾರುತಿ ಕ್ಷೇಮಾಭಿವೃದ್ಧಿ ಸಂಘ ಜಯನಗರ ಬಡಾವಣೆ, ಹಲೋ ಹಾಸನ್ ಸಂಜೆ ದಿನಪತ್ರಿಕೆ, ಕರವೇ ನಾರಾಯಣಗೌಡ ಬಳಗ, ನವಕರ್ನಾಟಕ ಕ್ರಾಂತಿ ಸೇನೆ, ಹೊಯ್ಸಳ ರೋಟರಿ, ಇನ್ನರ್ ವಿಲ್ ಕ್ಲಬ್, ಡಾ. ಶಿವಪ್ರಸಾದ್ ಕೇಶವ ನೇತ್ರಾಲಯ, ಕರ್ಣ ಆಸ್ಪತ್ರೆ, ಎಸ್.ಎಸ್.ಎಂ. ಆಸ್ಪತ್ರೆ, ಜೀವ ರಕ್ಷಕ ರಕ್ತನಿಧಿ, ಶ್ರೀ ಅನ್ನಪೂರ್ಣೇಶ್ವರಿ ಟ್ರೇಡರ‍್ಸ್, ಎಸ್.ಜೆ. ಕಾರ್ ಸೆಂಟರ್, ಕೆ.ಕೆ. ಪ್ಯೂಯಲ್, ಅತಿಯಾಸ್ ಇ.ವಿ. ಬೈಕ್, ಎಂ.ಡಿ.ಆರ್. ಮಾಲೀಕರು ಸಹಕರಿಸಿದ್ದಾರೆ ಎಂದು ಹೇಳಿದರು.
ಶ್ರೀಗಳ ಹುಟ್ಟು ಹಬ್ಬದ ಅಂಗವಾಗಿ ಉಚಿತ ಆರೋಗ್ಯ ಮೇಳ, ಅಗತ್ಯವಿದ್ದರೇ ಚಿಕಿತ್ಸೆ ಕೊಡಲಾಗುವುದು. ಜೊತೆಗೆ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅವದೂತರಿಗೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ವಿಶೇಷ ಗೌರವ ಸಮರ್ಪಣೆ ನೆರವೇರಿಸಲಾಗುವುದು. ಇದೆ ವೇಳೆ 108 ಮಹಿಳೆಯರ ಪಾದಪೂಜೆ ಕೂಡ ಮಾಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಳ್ಳುಗೋಪಾಲ್, ಪ್ರಧಾನ ಕಾರ್ಯದರ್ಶಿ ಬನವಾಸೆ ಮಂಜು, ಎಸ್.ಎಸ್.ಎಂ. ಆಸ್ಪತ್ರೆ ಆಡಳಿತಾಧಿಕಾರಿ ಡಾ. ವಿನಯ್ ಕುಮಾರ್, ಶ್ರೀ ಕರೀಬೀರೇಶ್ವರ ಟೈಲ್ಸ್ ಮತ್ತು ಹಾರ್ಡ್‌ವೇರ್ ಮಾಲೀಕರಾದ ಕುಮಾರ್, ದೀಪು, ಧರ್ಮಗೌಡ್ರು ಇತರರು ಉಪಸ್ಥಿತರಿದ್ರು.