ಹಾಸನ : ಹಾಸನ ಕ್ಷೇತ್ರದಲ್ಲಿ ಮಾಜಿ ಶಾಸಕರು ಮಾಡಿ ಹೋದ ಕೆಲಸವನ್ನು ರಿಪೇರಿ ಮಾಡುವ ಕೆಲಸ ನಮ್ಮದಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ, ಪ್ರೀತಂಗೌಡ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರು ಚುನಾವಣೆ ಪೂರ್ವದಲ್ಲಿ ಅನುದಾನ ಬಿಡುಗಡೆಯಾಗದಿದ್ದರೂ ಪುರದಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ, ರಸ್ತೆ ಕಾಮಗಾರಿಗಾಗಿ ರೈತರ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಈಗ ನಾನು ಹಾಗು ಸ್ವರೂಪ್ ಅಲ್ಲಿಗೆ ಹೋದರೆ ರಸ್ತೆ ಕಾಮಗಾರಿ ಪೂರ್ಣಗೊಳಿಸಿ, ಜಮೀನಿಗೆ ಪರಿಹಾರ ನೀಡಿ ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿದರೆ ಅಲ್ಲಿಗೆ ಯಾವುದೇ ರಸ್ತೆಯೂ ಮಂಜೂರಾಗಿಲ್ಲ. ಈಗ ಅದನ್ನೇಲ್ಲ ರಿಪೇರಿ ಮಾಡುವ ಕೆಲಸ ನಮ್ಮವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Tags
ಹಾಸನ