ಗೂಡ್ಸ್ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು ಕುರಿಗಳಂತೆ ತುಂಬೋದನ್ನು ನಿಲ್ಲಿಸಬೇಕು

ಹೆಬ್ಬಸಾಲೆ ಗಡಿಯಲ್ಲಿ ನಡೆದ ವಾಹನ ಅಪಘಾತದ ದುರ್ಘಟನೆ ಬಗ್ಗೆ ಆರ್ ಟಿ ಓ ಅಧಿಕಾರಿಗಳು ಹಾಗೂ ಪೊಲೀಸರು ನಿಜಕ್ಕೂ ಆಲೋಚನೆ ಮಾಡಬೇಕಾಗಿದೆ ಎಂದು ಎ ಪಿ ಎಂ ಸಿ ಮಾಜಿ ಅಧ್ಯಕ್ಷರಾದ ಕವನ್ ಗೌಡ ತಿಳಿಸಿದ್ದಾರೆ.

ಇಂತಹ ಅವಘಡ ಘಟಿಸಲು ಗೂಡ್ಸ್ ಸಾಗಿಸಲು ಪರವಾನಗಿ ಪಡೆದಿರುವ ವಾಹನಗಳು ಪ್ರಯಾಣಿಕರ ಸಾಗಣೆ ಮಾಡುತ್ತಿರುವುದೇ ಕಾರಣ .

ಹೆಚ್ಚಿನ ಕೂಲಿ ಕೊಡಿಸುವುದಾಗಿ ಕೂಲಿಕಾರ್ಮಿಕರಿಗೆ ಆಮಿಷ ಒಡ್ಡಿ ಅಥವಾ ಅವರ ಸ್ವಂತ ಲಾಭ ಮಾಡಲು ವಾಹನ ಮಾಲೀಕರು 20-30 ಕಿಲೋಮೀಟರು ದೂರದಲ್ಲಿ ಇರುವ ಕಾಪಿ ತೋಟಗಳಿಗೆ ಕರೆದುಕೊಂಡು ಹೋಗುತ್ತಾರೆ .

ಸರಿಯಾದ ಸಮಯಕ್ಕೆ ತಲುಪಲು ಅನಿವಾರ್ಯವಾಗಿ ಅತಿವೇಗದಿಂದ ವಾಹನ ಚಲಾಯಿಸ ಬೇಕಾಗುತ್ತದೆ. ಅಲ್ಲಿಯೇ ಸುತ್ತ ಮುತ್ತ ತೋಟಗಳಿಗೆ ಕೂಲಿಕಾರ್ಮಿಕರು ಕೆಲಸಕ್ಕೆ ಹೋದರೆ ಇಂಥ ಅವಘಡಗಳಿಂದ ಪಾರಾಗಬಹುದು

ಇಂತಹ ಘಟನೆಗಳು ಭಯ ಹುಟ್ಟಿಸುತ್ತದೆ ಎಂದ ಅವರು , ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗ ಬೇಕು ಯಾರೇ ಆಗಲಿ ಅಂತಹ ವಾಹನ ಮಾಲೀಕರಿಗೆ ಪ್ರಯಾಣಿಕರ ಸಾಗಣೆ ಮಾಡದಂತೆ ನಿರ್ದೇಶನ ನೀಡಬೇಕು.

ಒಂದು ವೇಳೆ ಮತ್ತೆ ಅದನ್ನೇ ಮುಂದುವರಿಸಿದಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು 

Post a Comment

Previous Post Next Post