ಸಿಇಎನ್ ಪೊಲೀಸ್ ಠಾಣೆಯಲ್ಲೇ ಸಮವಸ್ತ್ರವನ್ನು ಹರಿದು ಕಾನ್ಸ್ ಸ್ಟೆಬಲ್ ಮೇಲೆ‌ ಹಲ್ಲೆ

 ಹಾಸನ : ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲೇ ಕಾನ್ಸ್ ಸ್ಟೆಬಲ್ ಮೇಲೆ‌ಹಲ್ಲೆ ನಡೆಸಿ ಸಮವಸ್ತ್ರವನ್ನು ಹರಿದು ಹಾಕಿರುವ ಘಟನೆ ಗುರುವಾರ ನಡೆದಿದೆ. ಮಂಜುನಾಥ ಹಲ್ಲೆಗೊಳಗಾದ ಪೊಲೀಸ್ ಪೇದೆ.



ಅರೆಹಳ್ಳಿ ಮೂಲದ ವಿಕಾಸ್‌ಚಂದ್ರ ಎಂಬ ವ್ಯಕ್ತಿ ಸಿ.ಇ.ಎನ್ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದು, ನೆಟ್‌ವರ್ಕ್ ಸಮಸ್ಯೆಯಿಂದ ಎಫ್‌ಐಆರ್ ಕಾಪಿ ನೀಡಲು ವಿಳಂಬವಾಗಿದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅಲ್ಲದೇ ಡಿಜಿಟಲ್ ಸಹಿ ಹಾಕಲು ಕರೆದಾಗ ಬಾರದೆ ಕೂಗಾಡಿದ್ದು, ಠಾಣೆಗೆ ಸಂಬಂಧಿಸಿದ ಪ್ರಕರಣದ ಕಡತವನ್ನು ಹರಿದು ಹಾಕಿ, ಮೊಬೈಲ್ ಫೋನ್‌ನಿಂದ ಮಂಜುನಾಥ ಅವರ ತಲೆಗೆ ಹೊಡೆದು ಹಲ್ಲೆ ನಡೆಸಿ ಸಮವಸ್ತ್ರ ಹರಿದು ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ

Post a Comment

Previous Post Next Post