ಹಾಸನ: ( Hassan News)ಸಮಾಜದಲ್ಲಿ ಯಾರಾದರೂ ಒಳ್ಳೆಯ ಕೆಲಸ ಮಾಡುವುದು ಕಂಡರೆ ಬೆನ್ನು ತಟ್ಟಬೇಕೆ ಹೊರತು ಕಾಲು ಎಳೆಯುವ ಕೆಲಸ ಯಾರು ಮಾಡಬೇಡಿ ಎಂದು ಜಿಲ್ಲಾ ಸುಡುಗಾಡು ಸಿದ್ದರ ಮಹಾ ಸಂಘ, ಮತ್ತು ಎಸ್.ಸಿ./ಎಸ್.ಟಿ. ಅಲೆಮಾರಿ ಸಂಘದ ಜಿಲ್ಲಾಧ್ಯಕ್ಷ ಲಿಂಗರಾಜು ( Lingaraj) ಸಲಹೆ ನೀಡಿದರು.
ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ಹಾಸನ ಜಿಲ್ಲಾ ಸುಡುಗಾಡು ಸಿದ್ದರ ಮಹಾ ಸಂಘ, ತಾಲೂಕು ಸುಡುಗಾಡು ಸಿದ್ದರ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿವರ್ಷವೂ ಕೂಡ ನಮ್ಮ ಜನಾಂಗದ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ನಮ್ಮ ಸಮುದಾಯ ಕಡಿಮೆ ಇದ್ದರೂ ಕೂಡ ಎಲ್ಲಾ ಸಮಾಜಕ್ಕಿಂತ ಕಡಿಮೆ ಇಲ್ಲ ಎನ್ನುವ ರೀತಿ ನಮ್ಮ ಜನಾಂಗದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಹ ಕೊಡುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಎಲ್ಲಾರು ಸಹಕರಿಸುತ್ತಿದ್ದಾರೆ ಎಂದರು.
ಸುಡಗಾಡು ಸಮಾಜದಲ್ಲಿ ಹುಟ್ಟಿದ್ದೇವೆ. ಆದರೇ ನಮ್ಮ ಮಕ್ಕಳಲ್ಲಿ ವಿದ್ಯಾರ್ಥಿಗಳು ತುಂಬ ಕಡಿಮೆ ಇದ್ದು, ನಮ್ಮ ವೃತ್ತಿಯೇ ಬೇರೆ ಇದ್ದು, ಆ ವೃತ್ತಿಯಲ್ಲಿ ಮಕ್ಕಳು ತೊಡಗಿಸಿ ಕೊಳ್ಳುವುದು ಬೇಡ. ಪೋಷಕರಾದ ನಾವುಗಳು ವಿದ್ಯಾರ್ಥಿಗಳಿಗೆ ಒಳ್ಳೆಯ ಜೀವನ ನಿರ್ಮಿಸಿ ಕೊಡಬೇಕು ಎಂದು ಕಿವಿಮಾತು ಹೇಳಿದರು. ಚಿಕ್ಕ ವಯಸ್ಸಿನಲ್ಲಿಯೇ ಕೆಲಸಕ್ಕೆ ಹಾಕದೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ ಭವಿಷ್ಯ ಕಟ್ಟಿ ಕಡಬೇಕೆಂದು ಸಲಹೆ ನೀಡಿದರು.
ಊರುಗಳಲ್ಲಿ ಪಕ್ಷ ಬೇದ ಇರುತ್ತದೆ. ಆದರೇ ಇತರೆ ಸಮಾಜದ ನಡುವೆ ನಾವು ಬೇಧ ಮಾಡಬಾರದು. ಇಂತಹ ಕಾರ್ಯಕ್ರಮಕ್ಕೆ ಎಲ್ಲಾರೂ ಒಟ್ಟಿಗೆ ಕೈಜೋಡಿಸಿ. ನಮ್ಮ ಸಮಾಜದ ಸಂಘಟನೆಯಲ್ಲಿ ಈ ಕಾರ್ಯಕ್ರಮ ಇದೊಂದು ಪ್ರತಿಭಾ ಪುರಸ್ಕಾರ ಮಾತ್ರ ಆಗಿದೆ. ನಮ್ಮ ಜನಾಂಗದಲ್ಲಿ ಯಾರಾದರೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಅವರಿಗೆ ಬೆನ್ನು ತೊಟ್ಟಬೇಕೆ ಹೊರತು, ಸಮಾಜದಲ್ಲಿ ಸಾವಿರಾರು ಮಾತನಾಡುತ್ತಾರೆ ಎಂದು ಯಾರು ಕಾಲು ಎಳೆಯುವ ಕೆಲಸ ಮಾಡಬಾರದು ಎಂದು ಕೋರಿದರು. ಪ್ರತಿ ವರ್ಷ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಶಿಕ್ಷಣಕ್ಕಾಗಿ ಮುರಾರ್ಜಿ ದೇಸಾಯಿ ಹಾಸ್ಟೇಲ್ ಇತರೆ ಇದ್ದು, ಅಲ್ಲಿಗೆ ಮಕ್ಕಳನ್ನು ಕಳುಹಿಸಿ ಶಿಕ್ಷಣಕ್ಕೆ ಪ್ರೋತ್ಸಹ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜನಾಂಗದ ಮಕ್ಕಳಲ್ಲಿ ಯಾರು ಹೆಚ್ಚು ಅಂಕ ಪಡೆದಿದ್ದಾರೆ ಅವರಿಗೆ ಇದೆ ವೇಳೆ ಸನ್ಮಾನಿಸಿ, ಪ್ರೋತ್ಸಹ ಧನ ಸಹಾಯ ನೀಡಿ ಗೌರವಿಸಲಾಯಿತು.
ಇದೆ ವೇಳೆ ಹಾಸನ ಜಿಲ್ಲಾ ಸುಡುಗಾಡು ಸಿದ್ದರ ಮಹಾ ಸಂಘ, ತಾಲೂಕು ಸುಡುಗಾಡು ಸಿದ್ದರ ಸಂಘದ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ಅಲೆಮಾರಿ ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುಸಿದ್ದಪ್ಪ, ಮಾಜಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಹರೀಶ್, ಸದಸ್ಯ ಲಿಂಗಪ್ಪ, ತಾಲೂಕು ಗೌರವಾಧ್ಯಕ್ಷ ರಾಜಣ್ಣ, ಜಗನ್ನಾಥ್,ಕರಿಯಪ್ಪ, ರಾಜಣ್ಣ ಇತರರು ಉಪಸ್ಥಿತರಿದ್ದರು. ಸಿದ್ದರಾಜು ಸ್ವಾಗತಿಸಿದರು.
Tags
ಹಾಸನ