ಕಾರು – ಬೈಕ್ ಡಿಕ್ಕಿ : ಕಾಫಿ ತೋಟದ ರೈಟರ್ ಗೆ ಗಂಭೀರ ಗಾಯ

ಸಕಲೇಶಪುರ : ರಾಷ್ಟೀಯ ಹೆದ್ದಾರಿ 75 ರಲ್ಲಿ ಕಾರು ಬೈಕ್ ನಡುವೆ ನೆಡೆದ ಅಪಘಾತದಲ್ಲಿ ಕಾಫಿ ತೋಟದಲ್ಲಿ ರೈಟರ್ ಆಗಿ ನಿರ್ವಹಿಸುತ್ತಿದ್ದರೊಬ್ಬರೂ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ತಾಲೂಕಿನ ಬಾಳ್ಳುಪೇಟೆಯಲ್ಲಿ ಅಪಘಾತ ನಡೆದಿದ್ದು ಬಾಗೆ ಗ್ರಾಮದ ಟಾಟಾ ಕಾಫಿ ಎಸ್ಟೇಟ್ ನಲ್ಲಿ ರೈತರಾಗಿ ಕಾರ್ಯನಿರ್ವಹಿಸುತ್ತಿದ್ದ ಚಿನ್ನಳ್ಳಿ ಗ್ರಾಮದ ಶಿವಪ್ಪ( 55) ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಕಾರಿನವರು ಕೆಲಸದ ನಿಮಿತ್ತ ಬೈರಾಪುರ ಕಡೆಯಿಂದ ಸಕಲೇಶಪುರಕ್ಕೆ ತೆರಳುತ್ತಿದ್ದರು

ಗಾಯಗೊಂಡ ಶಿವಪ್ಪ ಅವರನ್ನು ಹಾಸನದ ಆಸ್ಪತ್ರೆಗೆ ಕರೆದೊಯ್ಯಲಗಿದ್ದು ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post a Comment

Previous Post Next Post