ಇಬ್ಬರು ಮಹಿಳೆರಿಂದ ಕೋಟಿ ಕೋಟಿ ವಂಚನೆ : ಖತರ್ನಾಕ್ ಗ್ಯಾಂಗ್ ವಿರುದ್ಧ ದಾಖಲಾಯಿತು ದೂರು

ಸಕಲೇಶಪುರ:  ಇಬ್ಬರು ಮಹಿಳೆರಿಂದ ಕೋಟಿ ಕೋಟಿ ವಂಚನೆ : ಖತರ್ನಾಕ್ ಗ್ಯಾಂಗ್ ವಿರುದ್ಧ ದಾಖಲಾಯಿತು ದೂರು.

ಸಕಲೇಶಪುರ ತಮಗೆ ಸೇರಿದ ನೂರಾರು ಕೋಟಿ ಆಸ್ತಿ ಕೋರ್ಟ್ ನಲ್ಲಿದೆ ಎಂದು ನಂಬಿಸಿ ಕೋಟಿ ಕೋಟಿ ಹಣ ಪಡೆದು ದೋಖಾ

ಹಾಸನ ಮೂಲದ ಇಬ್ಬರು ಮಹಿಳೆಯರ ವಿರುದ್ದ 22. ಜನರಿಂದ ದೂರು

ಒಟ್ಟು 3 ಕೋಟಿ 80 ಲಕ್ಷ ಹಣ ಪಡೆದು ವಂಚನೆ ಮಾಡಿರೊ ಬಗ್ಗೆ ದೂರು


ಹಾಸನ ನಗರ ಮೂಲದ ಅನುಷಾ @ ಕೃಪಾ ಹಾಗು ಭುವನೇಶ್ವರಿ @ ಅಶ್ವಿನಿ ಮತ್ತು ದೇವರಾಜ್, ಗಫಾರ್, ಶಶಿ,ಅಭಿಷೇಕ್, ಹರೀಶ್ ಸಾಗರ್ ವಿರುದ್ದ ಆರೋಪ

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ, ವಳಲಹಳ್ಳಿ, ನಿಡ್ತಾ, ಕರಗೂರು ಸೇರಿ ಹಲವು ಹಳ್ಳಿ ಜನರಿಗೆ ವಂಚನೆ ಆರೋಪ..

ತಮಗೆ ಸೇರಿದ ನೂರಾರು ಕೋಟಿ ಮೌಲ್ಯದ ಆಸ್ತಿ ಹಾಗು ಮೂರುವರೆ ಕೋಟಿಯಷ್ಟು ನಗದು ಕೋರ್ಟ್ ಕೇಸ್ ನಲ್ಲಿ ಸಿಲುಕಿರೊ ಬಗ್ಗೆ ಹೇಳಿದ್ದ ಆರೋಪಿಗಳು

ಅನುಷಾ ಆಗರ್ಭ ಶ್ರೀಮಂತರು ಅವರ ಅಪಾರ ಮೌಲ್ಯದ ಆಸ್ತಿ ಕೋರ್ಟ್ ವ್ಯಾಜ್ಯಕ್ಕೆ ಸಿಲುಕಿದೆ..

ಕೋರ್ಟ್ ವ್ಯಾಜ್ಯ ಬಗೆಹರಿಯಲಿ ಎಂದು ಪೂಜೆ

ಸಕಲೇಶಪುರ ತಾಲ್ಲೂಕಿನ ದೊಡ್ಡನಹಳ್ಳಿ ಚೌಡೇಶ್ವರಿ ದೇವಾಲಯಕ್ಕೆ ಪ್ರತೀ ತಿಂಗಳು ಬರ್ತಿದ್ದ ಅನುಷಾ

ಪ್ರತೀ ತಿಂಗಳು ಬಂದು ಹಂದಿ ಬಲಿಕೊಟ್ಟು ಪೂಜೆ..

ಅನುಷಾ ಪೂಜೆಗೆ ಬಂದಾಗ ಅಲ್ಲಿಗೆ ಪೂಜೆ ಗೆ ಬಂದವರ ಜೊತೆ ವಿಶ್ವಾಸ ಗಳಿಸಿ ಮೋಸ ಆರೋಪ

2018 ರಿಂದ ನಿರಂತರ ವಾಗಿ ಸುಳ್ಲು ಹೇಳಿ ಹಣ ಪಡೆದು ಮೋಸ

ತಾನು ಕಷ್ಟದಲ್ಲಿದ್ದು ಈಗ ಸಹಾಯ ಮಾಡಿದ್ರೆ ನೀವು ಕೊಟ್ಟ ಹಣಕ್ಕೆ ಡಬಲ್ ಹಣ ಕೊಡೊದಾಗಿ ನಂಬಿಸಿ ಮೋಸ

ಅನುಷಾ, ಭುವನೇಶ್ವರಿ ಸೇರಿ ಎಂಟು ಜನರ ವಿರುದ್ದ ಎಫ್ ಐ ಆರ್ ದಾಖಲು

ಸಕಲೇಶಪುರ ತಾಲ್ಲೂಕಿನ ಯಸಳೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು..

ಒಟ್ಟು ಫೋನ್ ಪೇ ಮೂಲಕ 1.46 ಕೋಟಿ ಹಾಗು ನಗದಾಗಿ 2.34 ಕೋಟಿ ಹಣ ಪಡೆದಿರೊ ಬಗ್ಗೆ ದೂರು

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರೊ ಪೊಲೀಸರು

Post a Comment

Previous Post Next Post