ಖಜಾಂಚಿ ಸ್ಥಾನಕ್ಕೆ ಹೇಮಂತ್, ರಾಜ್ಯ ಪರಿಷತ್ ಸ್ಥಾನಕ್ಕೆ ವಿಷ್ಣುಪ್ರಕಾಶ್( ಮಂಜುನಾಥ್) ಉಮೇದುವಾರಿಕೆ
ಹಾಸನ: ಜಿಲ್ಲಾ ಸರಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆ ಪ್ರಕ್ರಿಯೆ ಮುಗಿದು ಗೆಲುವು ಪಡೆದಿರುವ ಬಾಗೂರು ಕೃಷ್ಣೇಗೌಡ ಅವರು ಅಧ್ಯಕ್ಷ ಸ್ಥಾನಕ್ಕೆ ಸೋಮವಾರದಂದು ನೌಕರರ ಭವನದಲ್ಲಿ ನಿರ್ದೇಶಕರ ಜೊತೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಖಜಾಂಚಿ ಸ್ಥಾನಕ್ಕೆ ಹೇಮಂತ್, ರಾಜ್ಯ ಪರಿಷತ್ ಸ್ಥಾನಕ್ಕೆ ವಿಷ್ಣುಪ್ರಕಾಶ್(ಮಂಜುನಾಥ್) ನಾಮಪತ್ರ ಸಲ್ಲಿಸಿದರು.
ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಾಗೂರು ಕೃಷ್ಣೇಗೌಡ, ೨೦೨೪-೨೦೨೯ನೇ ಸಾಲಿನ ಸರಕಾರಿ ನೌಕರರ ಸಂಘಕ್ಕೆ ಈಗಾಗಲೇ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಆಗಿ ಈಗ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ನಿರ್ದೇಶಕರಾಗಿ ಮತ್ತು ತಾಲೂಕು ಅಧ್ಯಕ್ಷರುಗಳಾಗಿ ಆಯ್ಕೆಗೊಂಡವರಿಗೆ ಅಭಿನಂದನೆಯನ್ನು ಮೊದಲು ತಿಳಿಸುತ್ತೇನೆ. ಸರಕಾರಿ ನೌಕರರ ಸಂಘದಲ್ಲಿ ಕೆಲಸಗಳು ಬಹಳಷ್ಟಿದ್ದು, ಸರಕಾರಿ ನೌಕರರ ಸಂಘದಲ್ಲಿ ಸಮಸ್ಯೆಗಳು ಇದ್ದು, ಮುಖ್ಯವಾಗಿ ಪ್ರಮೋಷನ್, ಪೆನ್ಷನ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಾಗುತ್ತೇವೆ ಎಂದರು. ಈ ಸರಕಾರಿ ನೌಕರರ ಭವನವನ್ನು ಅಭಿವೃದ್ಧಿ ಮಾಡಲು ನವೀಕರಣಗೊಳಿಸಬೇಕಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಸರಕಾರಿ ನೌಕರರಿಗೆ ಭವನ, ಸಮುದಾಯ ಭವನಗಳನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೇ ಅಂತಹ ಭವನಗಳು ಹಾಸನದಲ್ಲಿ ಇರುವುದಿಲ್ಲ. ಅಂತಹ ಭವನ ನಿರ್ಮಾಣ ಮಾಡಲು ತೀರ್ಮಾನ ತೆಗೆದುಕೊಳ್ಳಲು ಕೆಲಸ ಮಾಡಲಾಗುವುದು. ಖಜಾಂಚಿ ಸ್ಥಾನಕ್ಕೆ ಹೇಮಂತ್, ರಾಜ್ಯ ಪರಿಷತ್ ಸ್ಥಾನಕ್ಕೆ ವಿಷ್ಣು ಪ್ರಕಾಶ್ (ಮಂಜುನಾಥ್) ಸ್ಪರ್ಧಿಸಿದ್ದಾರೆ. ಮೂವರನ್ನು ಗೆಲ್ಲಿಸಿದರೇ ೮ನೇ ವೇತನ ಆಯೋಗದ ಬಗ್ಗೆ ಕ್ರಮಕೈಗೊಳ್ಳಬೇಕೆಂದು ನಾವೆಲ್ಲಾ ಚಿಂತನೆ ಮಾಡುತ್ತಿದ್ದೇವೆ. ಜಿಪಿಟಿಸಿಗೆ ಹಾಗೂ ಶಿಕ್ಷಕರಿಗೆ ಸಂಬಂಧಿಸಿದ ಸಮಸ್ಯೆ ಕೂಡ ಇದ್ದು, ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಎಲ್ಲಾ ನಿರ್ದೇಶಕರು ಮತಚಲಾಯಿಸಿ ನಾನು ಮತ್ತು ನಮ್ಮ ತಂಡವನ್ನು ಗೆಲ್ಲಿಸಬೇಕೆಂದು ನಿರ್ದೇಶಕರಲ್ಲಿ ಮನವಿ ಮಾಡಿದರು.
ಇದೆ ವೇಳೆ ಕಾಂಗ್ರೆಸ್ ಮುಖಂಡರಾದ ಬಾಗೂರು ಮಂಜೇಗೌಡ, ಖಜಾಂಚಿ ಅಭ್ಯರ್ಥಿ ಹೇಮಂತ್, ರಾಜ್ಯ ಪರಿಷತ್ ಸ್ಥಾನದ ಅಭ್ಯರ್ಥಿ ವಿಷ್ಣುಪ್ರಕಾಶ್ ( ಮಂಜುನಾಥ್) ಹಾಗೂ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಹಾಗೂ ಜಿಲ್ಲಾ ಸರಕಾರಿ ನೌಕರರ ಸಂಘದ ನಿರ್ದೇಶಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Tags
ಹಾಸನ