ಡಿ.12 ಹಾಗೂ 13ರಂದು ದಡದಹಳ್ಳಿಯಲ್ಲಿ ಶ್ರೀ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆ ಮತ್ತು ಪುರ ಪ್ರವೇಶ ಕಾರ್ಯಕ್ರಮ

ಆಲೂರು: ಆಲೂರು ತಾಲ್ಲೂಕು ದಡದಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಸ್ಥಾನ ಟ್ರಸ್ಟ್ (ರಿ) ದಡದಹಳ್ಳಿ ಹಾಗೂ ಗ್ರಾಮಸ್ಥರ ನೆರವಿನಿಂದ ಪ್ರತಿಷ್ಠಾಪಿಸಿರುವ 6 ಅಡಿ ಎತ್ತರದ ಶ್ರೀ ಆಂಜನೇಯಸ್ವಾಮಿ ವಿಗ್ರಹ ಲೋಕಾರ್ಪಣೆ ಶಿಖರ ಕಲಶಾರೋಹಣ ಮತ್ತು ಪುರ ಪ್ರವೇಶ ಕಾರ್ಯಕ್ರಮಗಳು ಇದೇ ಡಿ.12 ಹಾಗೂ13 ರಂದು ನಡೆಯಲಿದೆ.

ನೂರಾರು ವರ್ಷಗಳ ಇತಿಹಾಸ ಇರುವ ದಡಿಹಳ್ಳಿ ಗ್ರಾಮದ ಶ್ರೀ ಅಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸ್ಥಳೀಯ ಯುವಕರು ಹಾಗೂ ಗ್ರಾಮಸ್ಥರು ಒಗ್ಗೂಡಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್‌ ಮೂಲಕ ಸುಮಾರು ಎರಡು ವರ್ಷದ ಪರಿಶ್ರಮದ ಫಲವಾಗಿ 6 ಅಡಿ ಎತ್ತರದ ಬೃಹತ್‌ ಆಂಜನೇಯಮೂರ್ತಿ ಲೋಕಾರ್ಪಣೆಗೆ ಸಿದ್ಧವಾಗಿದೆ. 35 ಲಕ್ಷ ರೂ. ವೆಚ್ಚದಲ್ಲಿ ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀ ರಂಭಾಪುರಿ ಪೀಠ, ಬಾಳೆಹೊನ್ನೂರು, ಶ್ರೀ ಮ.ನಿ.ಪ್ರ. ಲಿಂ ಡಾ. ಶಿವಕುಮಾರ ಸ್ವಾಮಿಗಳು ಸಿದ್ದಗಂಗಾ ಮಠ ತುಮಕೂರು ಇವರುಗಳ ದಿವ್ಯ ಆಶೀರ್ವಾದಗಳೊಂದಿಗೆ ಹಾಗೂ ಶ್ರೀ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ ಇವರ ಶುಭ ಹಾರೈಕೆಯೊಂದಿಗೆ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಪ್ರತಿಷ್ಠಾಪನೆ ನೆರವೇರಲಿದೆ ಎಂದು ಎಂದು ಟ್ರಸ್ಟ್‌ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರತಿಮೆ ಲೋಕಾರ್ಪಣೆ ಅಂಗವಾಗಿ ಎರಡು ದಿನ ನಾನಾ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.12 ರ ಗುರುವಾರಂದು ಸಂಜೆ 5.00 ರಿಂದ 6.15ರೊಳಗೆ ಸಲ್ಲುವ ಶುಭ ಗೋಧೂಳಿ ಲಗ್ನದಲ್ಲಿ ಗಂಗಾ ಪೂಜೆ ಸವತ್ಸಕಾಮದೇನು ಸಮೇತ ನೂತನ ದೇವಾಲಯ ಪ್ರವೇಶ ನಂತರ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರುತ್ತದೆ.ಡಿ.13ರ ಶುಕ್ರವಾರದಂದು ಬೆಳಗ್ಗೆ 5.30ಕ್ಕೆ ಸರಿಯಾಗಿ ಶ್ರೀ ಆಂಜನೇಯಸ್ವಾಮಿಗೆ ಪ್ರಾಣಪ್ರತಿಷ್ಟೆ ಪೂಜೆ ನಂತರ ರುದ್ರಾಭಿಷೇಕ ಬೆಳಗ್ಗೆ 9.00 ಗಂಟೆಗೆ ಸರಿಯಾಗಿ ನೂತನ ಗೋಪುರ ಕಲಶ ಪ್ರತಿಷ್ಠಾಪನೆ ಪೂಜೆ ತದನಂತರ 10.00 ಗಂಟೆಗೆ ಸರಿಯಾಗಿ ಆಲೂರು ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದಿಂದ ವೀರಗಾಸೆ, ನಂದಿಧ್ವಜ ಹಾಗೂ 108 ಕುಂಭಗಳ ಮೆರವಣಿಗೆಯೊಂದಿಗೆ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಸ್ವಾಮಿಗಳ ಪುರ ಪ್ರವೇಶದ ಮೆರವಣಿಗೆ ಪ್ರಾರಂಭಗೊಂಡು ನೂತನ ದೇವಾಲಯವನ್ನು ತಲುಪಿದ ನಂತರ ಧರ್ಮ ಸಮಾಂರಭ ನಡೆಯುತ್ತದೆ ನಂತರ ಎಲ್ಲಾ ಸದ್ಭಕ್ತರಿಗೂ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.

ಕಾರ್ಯಕ್ರಮದಲ್ಲಿ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಸ್ವಾಮಿಗಳು ಸಿದ್ದಗಂಗಾ ಮಠ, ತುಮಕೂರು, ಶ್ರೀ ಮ. ನಿ. ಪ್ರ. ಧರ್ಮರಾಜೇಂದ್ರ ಸ್ವಾಮಿಗಳು ಸಂಕಲಾಪುರ ಮಠ, ಶ್ರೀ ಷ. ಬ್ರ. ಸದಾಶಿವ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಂಸ್ಥಾನ ಹಿರೇಮಠ ಕಾರ್ಜುವಳ್ಳಿ, ಶ್ರೀ ಮ. ನಿ. ಪ್ರ. ಸ್ವರೂಪಿ ಮಹಾಂತ ಸ್ವಾಮಿಗಳು ಕಲ್ಲುಮಠ ಕೊಡ್ಲಿಪೇಟೆ, ಶ್ರೀ ಮ. ನಿ. ಪ್ರ. ಸದಾಶಿವ ಸ್ವಾಮಿಗಳು ಕಿರಿಕೊಡ್ಲಿ ಮಠ, ಕೊಡ್ಲಿಪೇಟೆ, ಶ್ರೀ ಮ. ನಿ. ಪ್ರ. ವಿಜಯಕುಮಾರ ಸ್ವಾಮಿಗಳು ತಣ್ಣೀರುಹಳ್ಳದ ಮಠ ಹಾಸನ, ಶ್ರೀ. ಡಿ. ಎಸ್. ನಂಜುಂಡಪ್ಪ, ಅಧ್ಯಕ್ಷರು, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್, ದಡದಹಳ್ಳಿ, ಶಾಸಕ ಸಿಮೆಂಟ್ ಮಂಜು ಆಲೂರು-ಸಕಲೇಶಪುರ-ಕಟ್ಟಾಯ ಕ್ಷೇತ್ರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಅಖಿಲ ಭಾರತ ವೀರಶೈವ ಮಹಾಸಭೆ, ಹಾಸನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬಿ.ಆರ್. ಗುರುದೇವ್, ತಾಲೂಕು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ರೇಣುಕ ಪ್ರಸಾದ್, ಬಾಳ್ಳುಪೇಟೆಯ ವೀರಶೈವ ಮುಖಂಡ, ಕಾಫಿ ಬೆಳೆಗಾರ ಬಿ.ಎಸ್ ಮಲ್ಲಿಕಾರ್ಜುನ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ.


Post a Comment

Previous Post Next Post