ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಹಾಸನ ಜಿಲ್ಲೆಯಲ್ಲಿ 4,37,232 ಪ್ರಕರಣಗಳು ಇತ್ಯರ್ಥ

 ದಿನಾಂಕ : 14-12-2024 ರಂದು ರಾಷ್ಟ್ರಾದ್ಯಂತ ನಡೆಸಲಾದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಹಾಸನ ಜಿಲ್ಲೆಯಲ್ಲಿ 4,37,232 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಮತ್ತು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ತಿಳಿಸಿದರು.

  ಜಿಲ್ಲಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಏಕಕಾಲಕ್ಕೆ ನಡೆಸಲಾದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಕಳೆದ ಬಾರಿ ನಡೆಸಲಾದ ರಾಷ್ಟ್ರೀಯ ಲೋಕ್ ಅದಾಲತ್ ಗಿಂತ 96,329 ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಮೂಲಕ ಉತ್ತಮ ಫಲಿತಾಂಶವನ್ನು ದಾಖಲಿಸಿದೆ.



ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದ 54 ಬಗೆಹರಿಸಬಹುದಾದ ಕ್ರಿಮಿನಲ್ ಪ್ರಕರಣಗಳು, 244 ಚೆಕ್ ಅಮಾನ್ಯ ಪ್ರಕರಣಗಳು, 43 ಹಣ ವಸೂಲಾತಿ ಪ್ರಕರಣಗಳು, 26 ಬ್ಯಾಂಕ್ ದಾವೆಗಳು, 248 ಮೋಟಾರು ವಾಹನ ಪರಿಹಾರದ ಪ್ರಕರಣಗಳು, 65 ವಿದ್ಯುತ್ ಕಾಯ್ದೆ ಪ್ರಕರಣಗಳು, 13 ವೈವಾಹಿಕ ಪ್ರಕರಣಗಳು, 194 ಸಿವಿಲ್ ಪ್ರಕರಣಗಳು, 143 ಭೂಸ್ವಾಧೀನ ಜಾರಿ ಪ್ರಕರಣಗಳು, 22 ಮೋಟಾರು ವಾಹನ ಪರಿಹಾರ ಜಾರಿ ಪ್ರಕರಣಗಳು, 101 ಇತರೆ ಜಾರಿ ಪ್ರಕರಣಗಳು, 14 ಜೀವನಾಂಶ ಪ್ರಕರಣಗಳು, 7 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು, 145 ಜನನ ಪ್ರಮಾಣ ಪ್ರಕರಣಗಳು, 2881 ಲಘು ಕ್ರಿಮಿನಲ್ ಪ್ರಕರಣಗಳು, 99 ಇತರೆ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ  ಒಟ್ಟು 4318 ಪ್ರಕರಣಗಳು ಇತ್ಯರ್ಥಗೊಂಡಿದ್ದು 40,12,59,162 ಹಣವನ್ನು ವಸೂಲಿ ಮಾಡಲಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ

125 ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, 105 ವಿದ್ಯುತ್ ಅದಾಲತ್ ಪ್ರಕರಣಗಳು, 4316 ಲಘು ಪ್ರಕರಣಗಳು, 2,77,491 ಮನೆಗಂದಾಯದ ಪ್ರಕರಣಗಳು, 1,50,877 ನೀರಿನ ಕಂದಾಯದ ಪ್ರಕರಣಗಳು ಸೇರಿ 4,32,914 ಪ್ರಕರಣಗಳು ಒಟ್ಟು ಇತ್ಯರ್ಥಗೊಂಡಿದ್ದು 6,03,81,059 ರೂ ವಸೂಲಿ ಮಾಡಲಾಗಿದೆ.

ಒಟ್ಟು 4,37,232 ಪ್ರಕರಣಗಳು ಇತ್ಯರ್ಥಗೊಂಡಿದ್ದು ಒಟ್ಟು 46,16,40,221 ರೂಪಾಯಿಗಳನ್ನು ವಸೂಲಿ ಮಾಡಲಾಗಿದೆ.

ಲೋಕ್ ಅದಾಲತ್ ನಿಂದ ಶೀಘ್ರ ನ್ಯಾಯವನ್ನು ನೀಡಲು ಪ್ರತಿ ಬಾರಿ ಲೋಕ್ ಅದಾಲತ್ ಗಳಲ್ಲೂ ಶ್ರಮಿಸಲಾಗುತ್ತಿದ್ದು ಇದರಿಂದ ವೈಮನಸ್ಸು ಗೊಂಡ ಸಂಬಂಧಗಳು ಪುನರ್ ಸ್ಥಾಪಿತವಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಪ್ರದಾನ ಜಿಲ್ಲಾ ನ್ಯಾಯಾಧೀಶರಾದ ಉಷಾರಾಣಿ ಯವರು ತಿಳಿಸಿದರು.

 ಲೋಕ್ ಅದಾಲತ್ ನಿಂದಾಗಿ ಪ್ರಕರಣಗಳು ಶೀಘ್ರ ವಿಲೇವಾರಿಗೊಂಡು ಕಕ್ಷಿಗಾರರು  ಸಂತಸದಿಂದ ಹಿಂದಿರುಗುತ್ತಿದ್ದು ನ್ಯಾಯಾಲಗಳ ಮೇಲೆ ವಿಶ್ವಾಸ ಹೆಚ್ಚುತ್ತಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ. ತಿಳಿಸಿ ಮುಂಬರುವ ಲೋಕ್ ಅದಾಲತ್ ಮಾರ್ಚ್ 8ನೆ ತಾರೀಖಿನಂದು ನಡೆಯಲಿದ್ದು ಕಕ್ಷಿದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಿದರು.

Post a Comment

Previous Post Next Post