ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ

ಹಾಸನ ಡಿ.9: ಬೆಂಬಲ ಬೆಲೆ ಯೋಜನೆಯಡಿ(ಎಂ.ಎಸ್.ಪಿ) 2024-25ನೇ ಸಾಲಿನಲ್ಲಿ ರೈತರಿಂದ ಭತ್ತ ಮತ್ತು ರಾಗಿಯನ್ನು ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತವನ್ನು ಖರೀದಿ ಏಜೆನ್ಸಿಯಾಗಿ ಸರ್ಕಾರವು ನೇಮಿಸಿರುತ್ತದೆ. ಹಾಸನ ಜಿಲ್ಲೆಯಲ್ಲಿ ರೈತರಿಂದ ಭತ್ತ ಮತ್ತು ರಾಗಿಯನ್ನು ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಅಗತ್ಯ ಕ್ರಮ ವಹಿಸಿರುತ್ತದೆ. ಸದರಿ ಯೋಜನೆಯ ಲಾಭವನ್ನು ಹಾಸನ ಜಿಲ್ಲೆಯ ಎಲ್ಲಾ ರೈತ ಬಂಧುಗಳು ಪಡೆದುಕೊಳ್ಳಬೇಕೆಂಬುದು ಜಿಲ್ಲಾಡಳಿತದ ಆಶಯವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತದ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.



 ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ ಎಂಎಸ್‌ಪಿ ದರ ಸಾಮಾನ್ಯ ಭತ್ತಕ್ಕೆ 2300 ರೂ. ಗ್ರೇಡ್-ಎ ಭತ್ತ 2320 ರೂ. ಮತ್ತು ರಾಗಿಗೆ ಪ್ರತಿ ಕ್ವಿಂಟಾಲ್ 4290 ರೂಗಳನ್ನು ನಿಗದಿಪಡಿಸಿದೆ. ಹಾಸನ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು 22 ಖರೀದಿ ಕೇಂದ್ರಗಳನ್ನು ತೆರೆದು ರೈತರ ನೋಂದಣಿಯನ್ನು ಪ್ರಾರಂಭಿಸಲಾಗಿದೆ. ಕೂಡಲೇ ರೈತರು ಈIಆ ಸಂಖ್ಯೆ, ಆಧಾರ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಖರೀದಿ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಹೆಸರು ನೊಂದಾಯಿಸಲು ಕೋರಿದೆ. ಹೆಸರು ನೋಂದಾಯಿಸಿಕೊAಡ ರೈತರಿಂದ ಮಾತ್ರ ಭತ್ತ ಮತ್ತು ರಾಗಿಯನ್ನು ಖರೀದಿಸಲಾಗುವುದು. 

ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನAತೆ ಗರಿಷ್ಠ 50 ಕ್ವಿಂಟಾಲ್ ಭತ್ತವನ್ನು ಮತ್ತು ಪ್ರತಿ ಎಕರೆಗೆ 10 ಕ್ವಿಂಟಾಲ್‌ನAತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಂಧುಗಳು ಅಗತ್ಯ ದಾಖಲೆಗಳೊಂದಿಗೆ ಖರೀದಿ ಕೇಂದ್ರಗಳಿಗೆ ಬಂದು ಹೆಸರು ನೊಂದಾಯಿಸಲು ಈ ಮೂಲಕ ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಲು ಕೋರಿದೆ. 

ನೋಂದಣಿ/ಖರೀದಿ ಕೇಂದ್ರಗಳ ವಿವರ : ಹಾಸನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಮೊಸಳೆಹೊಸಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ದುದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ರಾಜ್ಯ ಉಗ್ರಾಣ ನಿಗಮ ಆಲೂರು.

ಅರಸೀಕೆರೆ: ಜಾವಗಲ್-1 ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಜಾವಗಲ್-2 ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಜೆ.ಸಿ.ಪುರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಬಾಣಾವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಗಂಡಸಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ).

ಅರಕಲಗೂಡು: ಅರಕಲಗೂಡು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ರಾಮನಾಥಪುರದ ರೇಷ್ಮೆ ಇಲಾಖೆಯ ತರಬೇತಿ ಕೇಂದ್ರದ ಆವರಣ, ಬೇಲೂರು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಸಕಲೇಶಪುರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಹೊಳೆನರಸೀಪುರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಹಳ್ಳಿಮೈಸೂರು ರೈತ ಸಂಪರ್ಕ ಕೇಂದ್ರ.

ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ನುಗ್ಗೇಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಉದಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಶ್ರವಣಬೆಳಗೊಳ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎ.ಪಿ.ಎಂ.ಸಿ), ಬಾಗೂರು ರೈತ ಸಂಪರ್ಕ ಕೇಂದ್ರ. ಹೀರೆಸಾವೆ ರೈತ ಸಂಪರ್ಕ ಕೇಂದ್ರ ಖರೀದಿ ಕೇಂದ್ರಗಳಿಗೆ ಭೇಟಿ ನೀಡಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತದ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Post a Comment

Previous Post Next Post