ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಸಂಚಾರ

 ಜಿಲ್ಲೆಯಲ್ಲಿನ ಈ ಕೆಳಕಂಡ ಗ್ರಾಮಗಳಲ್ಲಿ ದಿನಾಂಕ:10/12/2024ರಂದು ಬೆಳಗ್ಗೆ ಕಾಡಾನೆಗಳು ಕಂಡುಬಂದಿದ್ದು ಸುತ್ತಮುತ್ತಲಿನ ಗ್ರಾಮಸ್ಥರು  ಎಚ್ಚರಿಕೆಯಿಂದ ಇರಬೇಕಾಗಿ ವಿನಂತಿ.

ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮದ ಕಲ್ಲಕುಂದ ಎಸ್ಟೇಟ್, ವಡೂರು ಗ್ರಾಮದ ವಡೂರು ಫಾರೆಸ್ಟ್, ಸುಳ್ಳಕ್ಕಿ ಮೇಘಲಕೆರೆ ಗ್ರಾಮದ ವಿಜಿ ಶೆಟ್ಟಿ ಅವರ ತೋಟದ ಪಕ್ಕದ ಕಾಡು, ಮಲ್ಲಗದ್ದೆ ಗ್ರಾಮದ ಅಕೇಶಿಯಾ ಪ್ಲಾಂಟೇಷನ್, ಕಾಡುಮನೆ ಗ್ರಾಮದ ಕಾಡುಮನೆ ಎಸ್ಟೇಟ್, ಸುತ್ತಮುತ್ತ ಕಾಡನೆಗಳು ಕಂಡು ಬಂದಿರುತ್ತವೆ 

ಹೆತ್ತೂರು - ಯಸಳೂರು ಹೋಬಳಿಯ ಮರ್ಕಳ್ಳಿ ಗ್ರಾಮದ ಬಸರಿ ಹಡ್ಲು, ಜೆಡಿಗದ್ದೆ, ಕಿರ್ಕಳ್ಳಿ ಗ್ರಾಮದ ಒಂಟಿಗದ್ದೆ, ಕುಮತಹಳ್ಳಿ ಗ್ರಾಮದ ವಾಡ್ ಗದ್ದೆ, ಬೋರನಮನೆ,  ಸುತ್ತಮುತ್ತ  ಕಾಡಾನೆಗಳು ಕಂಡುಬಂದಿರುತ್ತವೆ.

ಬೇಲೂರು ತಾಲ್ಲೂಕಿನ, ರಾಜಣ್ಣ ಅವರ ಕಾಡು ಬಾಳದಕಲ್ಲು ಹಾಗೂ ಬ್ಯಾಟರಿ ಗುಡ್ಡ, ಬ್ಯಾದನೆ ಗ್ರಾಮದ ಅಣ್ಣಾಮಲೈ ಎಸ್ಟೇಟ್, ಸುತ್ತಮುತ್ತ ಕಾಡಾನೆಗಳು ಕಂಡುಬಂದಿರುತ್ತವೆ.

ಸಾರ್ವಜನಿಕರು  ಕಾಡಾನೆಗಳಿಂದ ಎಚ್ಚರಿಕೆಯಿಂದ ಇರಬೇಕಾಗಿ  ವಿನಂತಿ.

Post a Comment

Previous Post Next Post