ಹಾಸನದಲ್ಲಿ ಪ್ಯಾಸೆಂಜರ್ ಆಟೋಗಳ ಅಕ್ರಮ ಲಗೇಜ್ ಸಾಗಣೆ: ಗೂಡ್ಸ್ ಆಟೋ ಚಾಲಕರಿಂದ ಜಿಲ್ಲಾಡಳಿತಕ್ಕೆ ಮನವಿ

 ಹಾಸನ: ಕೆಲವು ಪ್ಯಾಸೆಂಜರ್ ಆಟೋದವರು ಲಗೇಜ್‌ನ್ನು ತುಂಬಿಕೊಂಡು ಆಟೋವನ್ನು ಚಾಲನೆ ಮಾಡುತ್ತಿದ್ದು, ಇದರಿಂದ ಗೂಡ್ಸ್ ಆಟೋದವರಾದ ನಮ್ಮಗಳಿಗೆ ನಷ್ಟ ಉಂಟಾಗುತ್ತಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ಗೂಡ್ಸ್ ಆಟೋ ಮಾಲೀಕರು ಮತ್ತು ಚಾಲಕರಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೆ ವೇಳೆ ಗೂಡ್ಸ್ ವಾನ ಚಾಲಕರಾದ ವೇಧಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ನಗರದಲ್ಲಿ, ಹಾಸನ ತಾಲ್ಲೂಕಿನ ಸುತ್ತ ಮುತ್ತಲಿನ ಚಾಲಕರು ಗೂಡ್ಸ್ ಆಟೋವನ್ನು ಓಡಿಸಿಕೊಂಡು ಜೀವನ ನಡೆಸುತ್ತಿರುತ್ತೇವೆ. ಹೀಗಿರುವಲ್ಲಿ ಹಾಸನ ನಗರದಲ್ಲಿ ಕೆಲವು ಪ್ಯಾಸೆಂಜರ್ ಆಟೋ ಓಡಿಸುತ್ತಿರುವ ಚಾಲಕರುಗಳು, ಈ ಆಟೋಗಳಲ್ಲಿ ಸರಕನ್ನು ಅಕ್ರಮವಾಗಿ (ಲಗೇಜ್ ನ್ನು) ತುಂಬಿಕೊಂಡು ತಾಲ್ಲೂಕು ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ಬಾಡಿಗೆ ಮಾಡುತ್ತಿರುತ್ತಾರೆ. ಇದರಿಂದ ಗೂಡ್ಸ್ ಆಟೋವನ್ನು ಇಟ್ಟುಕೊಂಡಿರುವ ನಮ್ಮಗಳಿಗೆ ತುಂಬಾ ನಷ್ಟ ಉಂಟಾಗಿರುತ್ತದೆ ಎಂದರು. ಇದರಿಂದ ನಮ್ಮಗಳ ಜೀವನ ತುಂಬಾ ದುಸ್ಥರವಾಗಿರುತ್ತದೆ. ವಾಹನದ ಸಾಲದ ಕಂತುಗಳನ್ನು ಕಟ್ಟಲು, ಮನೆ ಬಾಡಿಗೆ ಕಟ್ಟಲು, ಇನ್ಸೂರೆನ್ಸ್ ಕಟ್ಟಲು ಹಾಗೂ ಜೀವನ ನಡೆಸಲು ತುಂಬಾ ಸಮಸ್ಯೆ ಆಗಿದೆ.
ದಯಮಾಡಿ ಪ್ಯಾಸೆಂಜರ್ ಆಟೋದವರು ಈ ರೀತಿ ಅಕ್ರಮವಾಗಿ ಗೂಡ್ಸ್ ನ್ನು (ಲಗೇಜನ್ನು ತುಂಬಿಕೊಂಡು ಬಾಡಿಗೆ ಮಾಡುತ್ತಿರುವುದನ್ನು ತುರ್ತಾಗಿ ಮತ್ತು ಕಡ್ಡಾಯವಾಗಿ ನಿಲ್ಲಿಸಬೇಕಾಗಿ ಹಾಗೂ ಈ ಬಗ್ಗೆ ಸೂಕ್ತ ಕಾನೂನು ಕ್ರಮವನ್ನು ಕೈಗೊಂಡು ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಈ ಮೂಲಕ ಬೇಡಿಕೊಳ್ಳುತ್ತೇವೆ ಎಂದು ಕೋರಿದರು.
ಇದೆ ಸಂದರ್ಭದಲ್ಲಿ ಗೂಡ್ಸ್ ಆಟೋ ಚಾಲಕರಾದ ಪಾಂಡುರಂಗ, ಫಯಾಜ್, ಶಿವಣ್ಣ, ಪ್ರವೀಣ್, ಪರಮೇಶ್, ಅಶ್ವಿನ್, ಹರೀಶ್, ಧನಂಜಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Post a Comment

Previous Post Next Post