ಕರವೇ ಪ್ರವೀಣ ಶೆಟ್ಟಿ ಬಣ : ಸುಂಕ ವಸೂಲಾತಿ ವಿರುದ್ಧ ಹೋರಾಟಕ್ಕೆ ಬೆಂಬಲ

 ಆಲೂರು: ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚೌಲ್ಗೆರೆ ಗ್ರಾಮದ ಸಮೀಪ ಹಾದು ಹೋಗಿರುವ ಬೆಂಗಳೂರು-ಮಂಗಳೂರು ಹಾಗೂ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಯಾವುದೇ ಮುನ್ಸೂಚನೆಗಳಿಲ್ಲದೆ ಹಾಗೂ ಕಾಮಗಾರಿ ಪೂರ್ಣಗೊಳ್ಳದೆ ಸಂತ ವಸತಿಗೆ ಮುಂದಾಗಿದ್ದರು ಇದನ್ನು ವಿರೋಧಿಸಿ ಕರವೇ ಪ್ರವೀಣ ಶೆಟ್ಟಿ ಬಣವು ಕರೆ ನೀಡಿದ್ದ ಪ್ರತಿಭಟನೆಗೆ ಸಹಕಾರ ನೀಡಿ ಪ್ರತಿಭಟನೆಯ ಯಶಸ್ವಿಗೆ ಸಹಕರಿಸಿದ ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳಿಗೆ ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಅವರು ಧನ್ಯವಾದಗಳನ್ನು ತಿಳಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ಡಿ.16ರಂದು ನಡೆದ ಸುಂಕ ವಸೂಲಾತಿ ವಿರುದ್ಧ ಹೋರಾಟಕ್ಕೆ ಎಲ್ಲಾ ಕನ್ನಡ ಪರ ಸಂಘಟನೆಗಳು ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಬಂದು ಸಹಕರಿಸಿ ಕೈಜೋಡಿಸಿದ್ದು, ಸಹಕರಿಸಿದ ಎಲ್ಲಾ ಸಂಘಟನೆಗಳಿಗೂ ಸ್ಥಳೀಯರಿಗೂ ಧನ್ಯವಾದಗಳು. ಆಲೂರು ತಾಲೂಕಿನಲ್ಲಿ ಇನ್ನೂ ಹಲವಾರು ಸಮಸ್ಯೆಗಳಿದ್ದು ಶೀಘ್ರವೇ ಅವುಗಳಿಗಾಗಿ ಹೋರಾಟವನ್ನು ಪ್ರಾರಂಭಿಸುತ್ತೇವೆ ಎಲ್ಲಾ ಸಾರ್ವಜನಿಕರು ಸಹಕಾರವನ್ನು ನೀಡಿ ನಮ್ಮ ಜೊತೆ ಕೈಗೊಡಿಸಬೇಕೆಂದು ತಿಳಿಸಿದರು.

ಕರವೇ ತಾಲೂಕು ಅಧ್ಯಕ್ಷ ರಾಘವೇಂದ್ರ ಎಚ್.ವಿ. ಮಾತನಾಡಿ, ತಾಲೂಕಿನಲ್ಲಿ ಹತ್ತು ಹಲವು ಜ್ವಲಂತ ಸಮಸ್ಯೆಗಳಿವೆ. ಜನರು ಮೂಲಭೂತ ಸೌಲಭ್ಯಗಳಿಗಾಗಿ ಪರಿತಪ್ಪಿಸುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವಂತಹ ಕೆಲಸ ಮಾಡುತ್ತಿಲ್ಲ. ಹೇಳಿಕೊಳ್ಳಲು ಮಾತ್ರ ತಾಲೂಕು ಕೇಂದ್ರವಷ್ಟೇ, ಇಲ್ಲಿಯ ಸಮಸ್ಯೆಗಳು ನೂರಾರು. ಪಟ್ಟಣದಲ್ಲಿ ಓಡಾಡಲು ಸರಿಯಾದ ರಸ್ತೆ ಇಲ್ಲ, ಮುಖ್ಯ ರಸ್ತೆಗಳೆಲ್ಲ ಗುಂಡಿ ಬಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ. ದಿನನಿತ್ಯ ಸಂಚಾರ ಮಾಡಲು ತೊಂದರೆಯಾಗುತ್ತಿದೆ. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ ಆದರೆ ಈ ರಸ್ತೆಯನ್ನು ನೋಡಿದರೆ ಗ್ರಾಮೀಣ ಭಾಗಕ್ಕೆ ಹೋಗುತ್ತಿರುವ ಹಾಗೆ ಭಾಸವಾಗುತ್ತದೆ. ಎಷ್ಟೋ ಜನ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಅಪಘಾತಗಳು ಆಗಿವೆ. ಇಷ್ಟೆಲ್ಲಾ ಆದರೂ ಕನಿಷ್ಠ ಪಕ್ಷ ಮಣ್ಣು ಮುಚ್ಚಿ ಸರಿಪಡಿಸುವಂತ ಕೆಲಸಕ್ಕೂ ಮುಂದಾಗಲಿಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರವೇ ಜಿಲ್ಲಾ ಕಾರ್ಯದರ್ಶಿಗಳಾದ ವೆಂಕಟೇಶ್, ಮಧು ಪಿ.ಗೌಡ, ಸದಸ್ಯರಾದ ಕೆ.ವಿ ಮಲ್ಲಿಕಾರ್ಜುನ, ಕಬೀರ್ ಅಹಮದ್ ಉಪಸ್ಥಿತರಿದ್ದರು.



Post a Comment

Previous Post Next Post