ಹಾಸನ: ಕಟ್ಟಡ ಬೀಳಿಸುವಾಗ ಎಲ್ಲಾ ರೀತಿಯ ಭದ್ರತೆ ಮಾಡಿಕೊಂಡು ಕೈ ಹಾಕಬೇಕು, ಏನಾದರೂ ಅಪಾಯ ವಾದರೇ ಯಾರು ಹೊಣೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಮಾಲೀಕರ ವಿರುದ್ಧ ಆಕ್ರೋಶವ್ಯಕ್ತಪಡಿಸಿದ ಘಟನೆ ನಗರದ ದೇವೆಗೆರೆ ಆವರಣದಲ್ಲಿರುವ ಗಣಪತಿ ದೇವಸ್ಥಾನದ ಬಳಿ ಆಕ್ರೋಶವ್ಯಕ್ತಪಡಿಸಿದ ಘಟನೆ ನಡೆಯಿತು.
ನಗರದ ನೀರು ಬಾಗಿಲು ಆಚಿಜನೇಯ ದೇವಸ್ಥಾನದ ರಸ್ತೆ ಮುಂಬಾಗ ಇರುವ ಜ್ಯೂವೆಲರಿ ಶಾಪ್ ನ ಹಳೆ ಕಟ್ಟಡ ಬೀಳಿಸುವಾಗ ಅಂಗಡಿ ಹಿಂಬಾಗದ ದೇವಿಗೆರೆ ಬಳಿ ಇರುವ ಶ್ರೀಗಣಪತಿ ದೇವಾಲಯದ ಬಳಿ ಇಡಲಾಗಿದ್ದ ರಾಮದೂತ ಬಿಂಧುಮಾದನ ಶರ್ಮ ಪೋಟೊ ಇರುವ ಪ್ಲೆಕ್ಸ್ ಹರಿದು ಹೋಗಿದ್ದು, ಇದನ್ನು ಕಂಡ ಪ್ರವೀಣ್ ಮಾಲೀಕನನ್ನು ಸ್ಥಳಕ್ಕೆ ಕರೆಯಿಸಿ ವಿಚಾರಿಸಿದರು.
ಈ ಜಾಗದಲ್ಲಿ ನೆರಳಿಗಾಗಿ ಅನೇಕರು ಕೂರುತ್ತಾರೆ. ಬೈಕ್ ನಿಲ್ಲಿಸುತ್ತಾರೆ. ಇವೆಲ್ಲಾ ಗಮನಿಸಿ ನಂತರ ಇಂತಹ ಕಾರ್ಯಕ್ಕೆ ಕೈಹಾಕಬೇಕು. ನಗರಸಭೆಯಿಂದ ಅನುಮತಿ ಪಡೆದು ಅದಕ್ಕೆ ಬೇಕಾದ ಸೇಫ್ಟಿ ಮಾಡಿದ ನಂತರ ಕಟ್ಟಡ ನೆಲಸಮಕ್ಕೆ ಮುಂದಾಗಬೇಕು. ಆದರೇ ಪ್ಲಾಸ್ಟಿಕ್ ಟಾರ್ಪಲ್ ಹಾಕಿದರೇ ಇದು ಸೇಫ್ಟಿ ಇರುವುದಿಲ್ಲ.
ಸೀಟನ್ನು ಹಾಕು ಡೆಮಾಲಿಸ್ ಮಾಡಬೇಕು. ಇಲ್ಲವಾದರೇ ಎನ್.ಆರ್. ವೃತ್ತದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರವೀಣ್ ಎಚ್ಚರಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಮಾಲೀಕನಿಗೂ ಹಾಗೂ ಪ್ರವೀಣ್ ನಡುವೆ ಕೆಲ ಸಮಯ ವಾಗ್ವಾದ ಉಂಟಾಯಿತು. ನಂತರ ರಾಮದೂತ ಬಿಂಧುಮಾದನ ಶರ್ಮ ಪೋಟೊ ಇರುವ ಪ್ಲೆಕ್ಸ್ ಹೊಸದಾಗಿ ಮಾಡಿಸಿಕೊಡುವುದಾಗಿ ಮಾಲೀಕರು ಹೇಳಿದರು.