ಮುಖ್ಯ ಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 25,000 ರೂ ದೇಣಿಗೆ


ಹಾಸನ.ಮೇ.30.(ಕರ್ನಾಟಕ ವಾರ್ತೆ):- ಕಸ್ತೂರಬಾ ಕನ್ಯಾವಿದ್ಯಾಲಯ ಸಂಸ್ಥೆಯ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸ್ಥೆಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಎಚ್.ಎಂ ಶಿವಣ್ಣ ಅವರು ಮುಖ್ಯ ಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ 25,000 ರೂ. ಚೆಕ್ ಅನ್ನು ದೇಣಿಗೆಯಾಗಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಿವಣ್ಣ ಅವರು ಮಾತನಾಡಿ ಸಂಸ್ಥೆಯ ಸಂಸ್ಥಾಪಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀಮತಿ ಯಶೋಧರಾ ದಾಸಪ್ಪ ಅವರ 115 ನೇ ವರ್ಷದ ಜನ್ಮ ಜಯಂತಿಯ ಅಂಗವಾಗಿ ಹಾಗೂ ಅವರ ಸವಿನೆನಪಿಗಾಗಿ ದೇಣಿಗೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

Post a Comment

Previous Post Next Post