ಅರಸೀಕೆರೆ:- ಕೊವೀಡ್ 19 ಮಾರಣಾಂತಿಕ ಮಹಾಮಾರಿಯನ್ನು ತಡೆಗಟ್ಟಲು ಸರ್ಕಾರಿ ವೈದ್ಯರೊಂದಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರ ಸಹಕಾರ ಅತ್ಯಗತ್ಯ ಎಂದು ತಹಸೀಲ್ದಾರ್ ಸಂತೋಷ್ ಕುಮಾರ್ ಹೇಳಿದರು.
ನಗರದ ಸರ್ಕಾರಿ ಜೆ.ಸಿ ಆಸ್ಪತ್ರೆಯಲ್ಲಿರುವ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಗರದ ಖಾಸಗಿ ಆಸ್ಪತ್ರೆಯ ವೈದ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಹಾಸನ ಜಿಲ್ಲೆಯಲ್ಲಿ ಹೊರ ರಾಜ್ಯದಿಂದ ಬಂದವರಲ್ಲಿ ಅದರಲ್ಲೂ ಮುಂಬೈನಿಂದ ಬಂದವರಲ್ಲಿ ಕರೋನಾ ಸೊಂಕು ಕಂಡು ಬರುತ್ತಿದ್ದು ಸಾರ್ವಜನಿಕರು ಮುಂಜಾಗ್ರತೆ ವಹಿಸಿ ಸರ್ಕಾರದ ನಿಯಮಗಳನ್ನು ಪಾಲಿಸಬೇಕೆಂದರು.
ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳಲ್ಲಿ ತಲೆನೋವು ,ಶೀತ ,ನೆಗಡಿ ಕಂಡುಬಂದರೆ ಅವರಿಗೆ ಚಿಕಿತ್ಸೆ ನೀಡಿದ ನಂತರ ವೈದ್ಯರು ಅವರ ಹೆಸರು ವಿಳಾಸ ಮೊಬೈಲ್ ಸಂಖ್ಯೆಯನ್ನು ಖಡ್ಡಾಯವಾಗಿ ಪಡೆದು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರೆ ಕರೋನಾ ಸೊಂಕನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ನಗರದ ಹೋಟೆಲ್‍ನಲ್ಲಿ ಬೆಳಗಾವಿಯ ನಿಪ್ಪಾಣಿಯಲ್ಲಿ ಕಾರ್ಯನಿರ್ವಹಿಸಿ ಹೊಳೆನರಸೀಪುರಕ್ಕೆ ಹೋಗುತ್ತಿದ್ದ ನಾಲ್ಕು ಮಂದಿ ಪೆÇಲೀಸರು ಊಟ ಪಾರ್ಸಲ್ ಪಡೆದಿದ್ದು ಮಾಲೀಕರು ಸೇರಿದಂತೆ ಇಲ್ಲಿನ ನೌಕರರನ್ನು ಕ್ವಾರೆಂಟೈನ್ ಮಾಡಲಾಗಿದ್ದು ಹಾಗೂ ಗ್ರಾಮಾಂತರ ಠಾಣೆಯ ಒರ್ವ ಪೆÇಲೀಸ್ ಸೇರೆದಂತೆ ಇನ್ನಿತರ ಪೆÇಲೀಸರನ್ನು ಸಂಪರ್ಕಿಸಿದ ಹಿನ್ನಲೆಯಲ್ಲಿ ಅವರೆಲ್ಲರನ್ನು ಕ್ವಾರೆಂಟೈನ್ ಮಾಡಲಾಗಿದೆ ಎಂದರು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಪ್ಪ ,ಆಯುಷ್ ವೈದ್ಯರಾದ ರಮೇಶ್ ,ಖಾಸಗಿ ವೈದ್ಯರಾದ ರೋಷನ್ ಲಾಲ್, ಡಾ. ಮುರುಗೇಶ್ ,ಡಾ.ಹೇಮ ,ಡಾ.ಸವೀತಾ ,ಡಾ. ರವಿವರ್ಮ ಃಆಗೂ ಇನ್ನಿತರರು ಇದ್ದರು
Tags
ಅರಸೀಕೆರೆ