ಕೊರೊನಾ ವಾರಿಯರ್ಸ್ ಗಳಿಗೆ ಬೂದಿಹಾಳ್ ವಿರಕ್ತಮಠದಿಂದ ಸನ್ಮಾನ.


 ಅರಸೀಕೆರೆ:- ಕೋವಿಡ್ 19 ವೈರಸ್ ಹರಡಿದ ಆರಂಭದ ದಿನಗಳಿಂದಲೂ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ಸಹಾಯಕರು, ಗ್ರಾ. ಪಂ. ಅಧಿಕಾರಿಗಳ ಕರ್ತವ್ಯ ಶ್ಲಾಘನೀಯ ಎಂದು ದೊಡ್ಡ ಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವಿರಕ್ತಮಠದ ಶಶಿಶೇಖರ ಸಿದ್ಧ ಬಸವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ದೊಡ್ಡ ಮೇಟಿಕುರ್ಕೆ ಗ್ರಾಮದ ಬೂದಿಹಾಳ್ ವಿರಕ್ತಮಠದ ಆವರಣದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನಸಿ ಮಾತನಾಡಿ ಹಿಂದಿನ ಕಾಲದಲ್ಲಿ ವೈದ್ಯ ನಾರಾಯಣ ಹರಿ ಎನ್ನುತ್ತಿz್ದÉವು ಪ್ರಸ್ತುತ ದಿನಗಳಲ್ಲಿ  ದೇವಾಲಯಗಳ ಬಾಗಿಲು ಮುಚ್ಚಲಾಗಿದೆ ಆದರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರೇ ದೇವರುಗಳ ರೂಪದಲ್ಲಿ ಕೊರೊನಾ ವೈರಾಣು ವಿರುದ್ಧ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ, ಸಂಘ ಸಂಸ್ಥೆಗಳು ಹಾಗೂ ಹಲವು ಮುಖಂಡರು ನಿರ್ಗತಿಕರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ಧಾರೆ ಎಲ್ಲರಿಗೂ ದೇವರು ಶುಭವನ್ನುಂಟುಮಾಡಲಿ ಎಂದರು.
ಡಾ ರಮೇಶ್ ಮಾತನಾಡಿ ನಾವೆಲ್ಲರೂ ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿಗಳು ಬೇರೆ ಬೇರೆಯಾಗಿ ಕರ್ತವ್ಯ ನಿರ್ವಹಿಸುತ್ತಿz್ದÉವು ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಂದು ಗ್ರಾ. ಪಂ. ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಪೆÇಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳೊಟ್ಟಿಗೇ ಕರ್ತವ್ಯ ನಿರ್ವಹಿಸಲು ಅವಕಾಶ ಸಿಕ್ಕಿತು ಇದನ್ನು ಮರೆಯಲಾಗುವುದಿಲ್ಲ, ಸಾರ್ವಜನಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಈ ಮೂಲಕ ಕೊರೊನಾ ನಿಗ್ರಹಕ್ಕೆ ಸಹಕರಿಸಬೇಕು ಎಂದರು.
ಮಾಡಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ ರಮೇಶ್, ರಾಂಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ ನಿತಿನ್, ದೊಡ್ಡ ಮೇಟಿಕುರ್ಕೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ ರಾಮಚಂದ್ರಪ್ಪ, ಹಿರಿಯ ಆರೋಗ್ಯ ಸಹಾಯಕರು ಮತ್ತು ಸಹಾಯಕಿಯರು, ಪ್ರಯೋಗಾಲಯದ ತಂತ್ರಜ್ಞರು, ನೀರಗಂಟಿಗಳು ಸೇರಿದಂತೆ ಇತರರಿಗೆ ಸನ್ಮಾನಿಸಲಾಯಿತು.
ಮಾಡಾಳು ಗ್ರಾ. ಪಂ. ಅಧ್ಯಕ್ಷರಾದ ಚಂದ್ರಶೇಖರ್, ಪಿಡಿಒ ಮಂಜುನಾಥ್, ದೊಡ್ಡ ಮೇಟಿಕುರ್ಕೆ ಗ್ರಾ. ಪಂ. ಸದಸ್ಯ ನಂಜುಂಡಶೆಟ್ಟರು,  ಹೋಮ್ ಗಾರ್ಡ್ ಪಿ ಜಿ ರೇಣುಕುರ್ಮಾ, ಸೇರಿದಂತೆ ಇತರರು ಉಪಸ್ಥಿತರಿದ್ದರು

Post a Comment

Previous Post Next Post