ಕೊರೊನಾ ರೋಗದಿಂದ ಮುಕ್ತವಾಗಲು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕೆಂಬ ಪರಿವರ್ತಿನೆಯಾಗಬೇಕು ಎಂದು ತಾಲ್ಲುಕು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಸಿ.ಮರಿಯಪ್ಪ ತಿಳಿಸಿದರು.
ರೆಡ್ ಕ್ರಾಸ್ ವತಿಯಿಂದ ಅಗ್ರಹಾರ ಗೇಟ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಡುಬಡವರಿಗೆ ಆಹಾರ ಕಿಟ್‍ಗಳನ್ನು ವಿತರಣೆ ಮಾಡುವ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಾ ಕೊರೊನಾ ರೋಗ ಇಡೀ ಪ್ರಪಂಚದಾದ್ಯಂತ ಹರಡಿದ್ದು ಈ ರೋಗಕ್ಕೆ ಯಾವುದೇ ಔಷಧಿಯಿಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ಅಲೆಮಾರಿ ಜನಾಂಗದ ಹನ್ನೆರಡು ಕುಟುಂಬಗಳನ್ನು ಗುರುತಿಸಿದ್ದು ಇಂದು ಅವರಿಗೆ ಆಹಾರ ಕಿಟ್‍ಗಳನ್ನು ನೀಡುತ್ತಿರುವುದಾಗಿ ತಿಳಿಸಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಸಲಹೆ ನೀಡುತ್ತಾ ಆಹಾರ ಕಿಟ್ ಜೊತೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದರು.
ಅಗ್ರಹಾರ ಗೇಟ್ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಮಾತನಾಡಿ ರೆಡ್ ಕ್ರಾಸ್ ಸಂಸ್ಥೆಯು ಅನೇಕ ರೀತಿಯಲ್ಲಿ ಕಡುಬಡವರಿಗೆ, ನಿರಾಶ್ರಿತರಿಗೆ, ಕಟ್ಟಡ ಕಾರ್ಮಿಕರಿಗೆ ಸಹಾಯ ಮಾಡುತ್ತಿರುವುದಕ್ಕೆ ಅಭಿನಂದನೆ ತಿಳಿಸುತ್ತಾ ಯಾವುದೇ ಮದುವೆ ಸಮಾರಂಭವಾಗಲೀ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಪಾಡದೇ ಇರುವುದು ಕಂಡುಬರುತ್ತಿದೆ. ದಯಮಾಡಿ ನಮ್ಮ ರಕ್ಷಣೆಗಾಗಿ ಅಂತರವನ್ನು ಕಾಯ್ದುಕೊಳ್ಳಿ. ಕೆಲವೊಂದು ಸಮಯದಲ್ಲಿ ಆಗದಿದ್ದರೆ ಅಂತಹ ಸ್ಥಳದಲ್ಲಿ ಕೆಮ್ಮುವುದಾಗಲೀ, ಶೀನುವುದಾಗಲೀ ಕಡ್ಡಾಯವಾಗಿ ಮಾಡದೆ ತಮ್ಮನ್ನು ತಾವು ಕೊರೊನಾದಿಂದ ರಕ್ಷಸಿಕೊಳ್ಳಿ ಎಂದು ತಿಳಿಸುತ್ತಾ ಹೋಮ್ ಕ್ವಾರಂಟೈನ್ ಮಾಡಲು ಕಿ.ಮ.ಆ.ಸಹಾಯಕಿಯರು ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯ ರಕ್ಷಣೆಗಾಗಿ ಮನೆಬಾಗಿಲಿಗೆ ಬಂದು ಆರೋಗ್ಯ ಶಿಕ್ಷಣವನ್ನು ಕೊಡುವ ಸಂದರ್ಭದಲ್ಲು ನೌಕರರಿಗೆ ಯಾವುದೇ ರೀತಿಯ ಅನುಚಿತ ವರ್ತನೆಯಾಗಲೀ, ಅವರನ್ನು ನಿಂದಿಸುವುದಾಗಲಿ ದಯಮಾಡಿ ಮಾಡದೆ ಮಾನವೀಯತೆಯಿಂದ ಗೌರವಿಸಿ ಎಂದರು.
ಕಾರ್ಯದರ್ಶಿ ಆರ್.ಬಿ.ಪುಟ್ಟೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜ ಸೇವಕರಾದ ಶಂಕರನಾರಾಯಣ ಐತಾಳ್, ಸಮಾಜ ಕಲ್ಯಾಣ ಇಲಾಖೆಯ ಹೆಚ್.ಆರ್.ನಿಂಗೇಗೌಡ ಮಾತನಾಡಿದರು. ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.
ಚಿತ್ರಃ ರೆಡ್ ಕ್ರಾಸ್ ವತಿಯಿಂದ ಅಗ್ರಹಾರ ಗೇಟ್ ಪ್ರಾ.ಆ.ಕೇಂದ್ರದ ವ್ಯಾಪ್ತಿಯ ಹಡವನಹಳ್ಳಿಯ ಅಲೆಮಾರಿ ಜನಾಂಗದವರಿಗೆ ಆಹಾರ್ ಕಿಟ್ ವಿತರಿಸಲಾಯಿತು.
Tags
ಹೊಳೆನರಸೀಪುರ