ಅಪಘಾತ ವಾದ ಅದೇ ಜಾಗದಲ್ಲಿಂದು ಮತ್ತೊಂದು ಗೂಡ್ಸ್ ಆಟೋ

ಹಾಸನ : ಹಾಸನ ನಗರದ ಹೊರವಲಯ ಕೆ.ಹೊಸಕೊಪ್ಪಲಿನ‌ ಮುಖ್ಯರಸ್ತೆಯಲ್ಲಿ ಹದಗೆಟ್ಟ ರಸ್ತೆ ಯಿಂದ ನಿತ್ಯ ನೂರಾರು ವಾಹನಗಳು ಪರದಾಡುತ್ತ ಸಾಗಬೇಕಿದೆ , ಮೊನ್ನೆ ದ್ವಿಚಕ್ರ-ಕಾರು , ನೆನ್ನೆ ಗೂಡ್ಸ್ ಆಟೋ ಅಪಘಾತ ವಾದ ಅದೇ ಜಾಗದಲ್ಲಿಂದು ಮತ್ತೊಂದು ಗೂಡ್ಸ್ ಆಟೋ ಮಕಾಡೆ ಮಲಗಿದೆ , ಅದೃಷ್ಟವಶಾತ್ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಬಚಾವಾಗಿದ್ದಾರೆ !! ಮುಂದಿನ ಕೆಲವು ತಿಂಗಳು ಮಳೆಯಾಗುವ ನಿರೀಕ್ಷೆ ಇರುವುದರಿಂದ ಜನಪ್ರತಿನಿಧಿ ಅಧಿಕಾರಿಗಳು ಸಮಗ್ರ ರಸ್ತೆ ಸಂಚಾರಕ್ಕೆ ಉತ್ಕೃಷ್ಟ ರಸ್ತೇ ಡಾಂಬರು/ಕಾಂಕ್ರೀಟನ್ನು ಹಾಕಿ ವಾಹನ ಸಂಚರಿಸಲು ಅನುವು‌ಮಾಡಿಕೊಡಬೇಕಿದೆ.

Post a Comment

Previous Post Next Post