ರಾಮನಾಥಪುರ.- ಶಿರದನಹಳ್ಳಿ ಗ್ರಾಮದ ಬಸವಕಲ್ಯಾಣ ಮಠದ ಮುಂದೆ ಹಳೆ ಮರವೊಂದು ಒಣಗಿದ್ದು ಯಾವಾಗ ಬಿದ್ದು ಸಾರ್ವಜನಿಕರು ಮತ್ತು ವಾಹನಗಳಿಗೆ ತೊಂದರೆಯಾಗುವುದೇ ಎಂಬ ಭಯ ಸಾರ್ವಜನಿಕರಲ್ಲಿ ಅವರಿಸಿದೆ.
ರಾಮನಾಥಪುರದಿಂದ ಮೈಸೂರಿಗೆ ಹೋಗುವ ಶಿರದನಹಳ್ಳಿ ಮಠದ ಮುಂದೆ ಇರುವ ಈ ಒಣಗಿದ ಮರದ ಹತ್ತಿರ ವಿದ್ಯುತ್ ಕಂಬ ವಿದ್ದು ಯಾವ ವೇಳೆ ಗಾಳಿಗೆ ಬಿದ್ದ್ರೆ ಇಲ್ಲಿ ತಿರುಗಾಡುವ ಕೆ.ಎಸ್.ಅರ್.ಟಿ.ಸಿ. ಬಸ್‍ಗಳು ಇನ್ನಿತರ ವಾಹನಗಳಿಗೆ ತೊಂದೆಯಾಗುವುದನ್ನು ತಪ್ಪಿಸಲು ಲೋಕೋಪಯೋಗಿ ಇಲಾಖೆ ಅಥವಾ ಅರಣ್ಯ ಇಲಾಖೆಯವರು ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Tags
ಅರಕಲಗೂಡು