ದೇಶದಲ್ಲಿ ಇಂದು ಸತತ 14ನೇ ದಿನವೂ ಇಂದನ ಬೆಲೆಯಲ್ಲಿ ಏರಿಕೆ

ದೇಶದಲ್ಲಿ ಇಂದು ಸತತ 14ನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 51 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 61 ಪೈಸೆ ಹೆಚ್ಚಳವಾಗಿದೆ. ದಿಲ್ಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 78.88 ರೂ.ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 77.67 ರೂ. ಆಗಿದೆ. ದಿಲ್ಲಿಯಲ್ಲಿ ಜೂನ್ 9ರ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್‌ನ ಪ್ರತಿ ಲೀಟರ್ ಬೆಲೆ ಕ್ರಮವಾಗಿ 5.88 ರೂ. ಹಾಗೂ 6.50ರೂ. ಹೆಚ್ಚಳವಾಗಿದೆ.

14 ದಿನಗಳಿಂದ ದೇಶದ್ಯಾಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ದರ ಏರಿಕೆ ಇಂದು ಕೂಡ ಮುಂದುವರಿದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 57 ಪೈಸೆ ಏರಿಕೆಯಾಗಿದ್ದು, 88.44 ರೂ. ಆಗಿದೆ. ಡೀಸೆಲ್ ಬೆಲೆ 62 ಪೈಸೆ ಏರಿಕೆಯಾಗಿದ್ದು,73.86 ರೂ. ಹೆಚ್ಚಳವಾಗಿದೆ.

Post a Comment

Previous Post Next Post