ಬೆಂಗಳೂರಿನಲ್ಲಿರುವ ಶಿವಣ್ಣ ಕಬಾಬ್ ಸೆಂಟರ್ ಮಾಲೀಕನಿಗೆ ಇಂದು ಕೊರೊನ ಪಾಸಿಟಿವ್ ಬಂದಿದ್ದು ಅವರ ಕುಟುಂಬವನ್ನು ಹೋಂ ಕ್ವಾರೆಂಟೆನ್ ಮಾಡಲಾಗಿದೆ. ಈ ಸುದ್ದಿ ಟಿವಿ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಹಾಸನದ ಜನತೆ ಭಯ ಮತ್ತು ಗೊಂದಲಕ್ಕಿಡಾಗಿದ್ದಾರೆ. ಹಾಸನದ ಎಂ.ಜಿ.ರಸ್ತೆಯಲ್ಲಿರುವ ಶಿವಣ್ಣ ಕಬಾಬ್ ಸೆಂಟರ್ ನಾನ್ ವೆಜ್ ಐಟಂಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಸುದ್ದಿ ಬಿತ್ತರವಾಗುತ್ತಿದ್ದಂತೆ ಕೆಲವರು ಗಾಬರಿಗೊಂಡಿದ್ದಾರೆ. ಶಿವಣ್ಣ ಕಬಾಬ್ ನಿಂದ ಇಂದು ಕೆಲವರು ಪಾರ್ಸೆಲ್ ತೆಗೆದುಕೊಂಡು ಹೋಗಿದ್ದಾರಲ್ಲದೆ ಕೆಲವರು ಅಲ್ಲೆ ನಾನ್ ವೇಜ್ ಸೇವಿಸಿದ್ದಾರೆ. ಹಾಸನದ ಶಿವಣ್ಣ ಕಬಾಬ್ ಮಾಲೀಕನಿಗೆ ಕೊರೊನ ಎಂಬ ಸುದ್ದಿ ನಗರದಾದ್ಯಂತ ಹರಿದಾಡಿದ್ದು ಕೆಲ ಕಾಲ ಗೊಂದಲ ಸೃಷ್ಠಿಯಾಗಿತ್ತು. ಶಿವಣ್ಣ ಅವರಿಗೆ ಕೆಲವರು ಕರೆ ಮಾಡಿ ವಿಚಾರಿಸಿದ್ದಾರೆ. ಇದೀಗ ಶಿವಣ್ಣ ಅವರು ಸ್ಪಷ್ಟನೆ ನೀಡಿದ್ದು ಬೆಂಗಳೂರಿನಲ್ಲಿರುವ ನನ್ನ ಹೆಸರಿನ ಶಿವಣ್ಣ ಕಬಾಬ್ ಸೆಂಟರ್ ಮಾಲೀಕನಿಗೆ ಕೊರೊನ ಪಾಸಿಟಿವ್ ಬಂದಿದೆ. ಹಾಸನ ನಗರದ ಜನತೆ ಸುಳ್ಳು ವದಂತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
Tags
ಹಾಸನ