ಐದು ಪಟ್ಟು ಹಣದ ಆಸೆಗೆ ಲಕ್ಷ ಕಳೆದುಕೊಂಡ ಮಹಿಳೆ

ಹಾಸನ: 1 ಲಕ್ಷಕ್ಕೆ 5 ಲಕ್ಷ ಹಣ ಕೊಡುವುದಾಗಿ ನಂಬಿಸಿ ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೂನ್ 20ರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಆಡುವಳ್ಳಿ 1 నేల తానా నివాసి రాయినా ఎంబువేరు శందాయ ಕಟ್ಟಲು ನಗರಸಭೆ ಬಳಿ ಹೋಗಿ ಅಪರಿಚಿತರೊಂದಿಗೆ ಮಾತನಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಎಂಟ್ರಿ ಕೊಟ್ಟ ಅನಾಮಿಕ ವ್ಯಕ್ತಿ ನಾನು ನಿಮ್ಮ ವಾರ್ಡ್ ನ ಕೌನ್ಸಿಲರ್ ಸ್ನೇಹಿತ. ಇತ್ತೀಚೆಗೆ ಒಂದು ಹೊಸ ಸೀಂ ಬಂದಿದೆ. ಅದು ಕೇವಲ 25 ಜನರಿಗೆ ಮಾತ್ರ. ಆ ಯೋಜನೆ ಲಾಭವೆಂದರೆ ನೀವು ಒಂದು ಲಕ್ಷ ರೂ. ನೀಡಿದರೆ ನಾವು 5 ಲಕ್ಷ ರೂ. ಕೊಡುತ್ತೇವೆ ಎಂದು ಬಣ್ಣದ ಮಾತುಗಳನ್ನಾಡಿ ನಂಬಿಸಿದ. 1 ಲಕ್ಷಕ್ಕೆ 5 ಪಟ್ಟು ಹಣ ಸಿಗಲಿದೆ ಎಂಬ ಆಸೆ ಬಿದ್ದ ಮಹಿಳೆ ಓಕೆ ಎಂದು ಬಿಟ್ಟಳು. ಅಷ್ಟೇ ಅಲ್ಲ ಅನಾಮಿಕರಿಗೆ 1 ಲಕ್ಷ ರೂ. ಹಣ ಕೊಟ್ಟು ಆಧಾರ್ ಕಾರ್ಡ್ ಸಹ ನೀಡಿದ್ದಾರೆ.

ಕೆಲವೇ ಹೊತ್ತಿನಲ್ಲಿ 1 ಲಕ್ಷ ರೂ. ಸಿಕ್ಕಿದೆ ತಡ ಯಾರಿಗುಂಟು, ಯಾರಿಗಿಲ್ಲ ಎಂದು ಆಸಾಮಿ ಹಣ ಪಡೆದು ಪರಾರಿಯಾಗಿದ್ದಾನೆ. ಅದಾದ ಬಳಿಕ ಬಣ್ಣದ ಮಾತಿಗೆ ಮರುಳಾಗಿ ಹೋದ ಮಹಿಳೆ, ನನ್ನ ಹಣ ಕೊಡಿಸಿಕೊಡಿ ಎಂದು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Post a Comment

Previous Post Next Post