ಕೊಂಡಜ್ಜಿ ಗ್ರಾಮದ ಕೆರೆ ಪುನಶ್ಚೇತನ


ಹಾಸನ,ಜೂ:10:- ಹಾಸನ ತಾಲ್ಲೂಕಿನ ಬಾಗೆ ಗ್ರಾಮ ಪಂಚಾಯಿತಿಯ ಕೊಂಡಜ್ಜಿ ಗ್ರಾಮದಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಪ್ರೇರಣೆಯೊಂದಿಗೆ ಪರಿಸರ ದಿನದಂದು ಗುಂಡು ತೋಪಿನಲ್ಲಿದ್ದ ಪುರಾತನ ಕಲ್ಯಾಣಿಯ ಪುನಶ್ಚೇತನವನ್ನು ನರೇಗಾ ಯೋಜನೆಯಡಿಯಲ್ಲಿ ಗ್ರಾಮಸ್ಥರು ಶ್ರಮದಾನದ ಮೂಲಕ ನೆರವೇರಿಸಲು ಚಾಲನೆ ನೀಡಿದರು. ಕಲ್ಯಾಣಿಯ ಒಳಗಡೆ ಕುಸಿದು ಬಿದ್ದಂತಹ ಭಾರಿ ಕಲ್ಲುಗಳನ್ನು ಶ್ರಮದಾನದ ಮೂಲಕ ತೆರವು ಮಾಡಿ, ಹೂಳನ್ನು ಎತ್ತುವ ಕೆಲಸವನ್ನು ಪ್ರಾರಂಭ ಮಾಡಿದರು. 
ಕಲ್ಯಾಣಿ ಒಳ ಭಾಗದಲ್ಲಿ ಮತ್ತು ಸುತ್ತಲಿದ್ದ ಗಿಡ ಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಚ್.ಅಪ್ಪಾಜಿಗೌಡ, ಮಾಜಿ ಅಧ್ಯಕ್ಷರಾದ ಸುಬ್ಬುಸ್ವಾಮಿ, ಹಿರಿಯ ಸದಸ್ಯರಾದ ಪುಟ್ಟಯ್ಯ ರೂಪಹಾಸನ, ವೈ.ಗಿರಿಜಾ, ಗ್ರಾಮ ಪಂಚಾಯತ್ ಸದಸ್ಯೆ ಲತಾ ಅವರು ಕಲ್ಯಾಣಿ ಪುನಶ್ಚೇತನದ ಸ್ಥಳಕ್ಕೆ ಭೇಟಿ ನೀಡಿ, ಕೆಲಸವನ್ನು ವೀಕ್ಷಿಸುವುದರ ಜೊತೆಗೆ ಕಲ್ಲು ಮತ್ತು ಹೂಳನ್ನು ತೆಗೆಯಲು ಮಾರ್ಗದರ್ಶನ ನೀಡಿದರು. ಪಂಚಾಯತ್ ಸಿಬ್ಬಂದಿಯೂ ಸ್ಥಳದಲ್ಲಿ ಹಾಜರಿದ್ದರು. 
ಊರಿನ ಪ್ರವೇಶದ ಬಳಿಯೇ ಮುಚ್ಚಿ ಹೋಗಿರುವ ಇನ್ನೊಂದು ಕಲ್ಯಾಣಿಯ ಸ್ಥಳಕ್ಕೂ ಭೇಟಿ ನೀಡಿ, ಪರಿಶೀಲಿಸಿ ಅದರ ಪುನಶ್ಚೇತನವನ್ನೂ ಕೈಗೊಳ್ಳುವಂತೆ ಪ್ರತಿಷ್ಠಾನದ ಸದಸ್ಯರು ಸಲಹೆ ನೀಡಿದರು. ಕೊಂಡಜ್ಜಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಪ್ರೇರಣಾ ವಿಕಾಸ ವೇದಿಕೆ, ಹಸಿರುಭೂಮಿ ಪ್ರತಿಷ್ಠಾನದ ಸಹಯೋಗದೊಂದಿಗೆ ಶಿಕ್ಷಕಿ ಗಿರಿಜಾದಿನಕರ್ ಅವರು ತಮ್ಮ ಮಕ್ಕಳಿಗೆ ಪರಿಸರದ ಕುರಿತು ಉತ್ತೇಜನ ನೀಡಲು, ಅವರನ್ನೂ ಒಳಗೊಂಡು ಬೆಳೆಸಿರುವ ಹಣ್ಣಿನ ಗಿಡಗಳು ಅತ್ಯಂತ ಉತ್ಕøಷ್ಟ ರೀತಿಯಲ್ಲಿ ಬೆಳೆಯುತ್ತಿದ್ದು ಪ್ರತಿಷ್ಠಾನದ ಸದಸ್ಯರು ಪ್ರಶಂಸಿದರು.            
                                         

1 Comments

Previous Post Next Post