ಇತ್ತೀಚೆಗೆ ಕರೊನಾ ವಿರುದ್ಧ ಜಾಗೃತಿ ಹಾಗೂ ಕೊರೊನಾ ಸಮಯದಲ್ಲಿ ಜೀವ ಪಣಕ್ಕಿಡ್ಡು ಹೋರಾಡುತ್ತಿರುವವರಿಗೆ ನಮನ ಸಲ್ಲಿಸುವ ಉದ್ದೇಶದಿಂದ ನಿರ್ಮಿಸಿ ಬಿಡುಗಡೆ ಆಗಿದ್ದ ಬದಲಾಗು ನೀನು ಹಾಡು ಇದ್ದಕ್ಕಿದ್ದಂತೆ ಯುಟ್ಯೂಬ್‌ನಿಂದ ಕಾಣೆಯಾಗಿದೆ.
ಹೌದು, ಹಾಡನ್ನು ಡಿ ಬೀಟ್ಸ್ ಅಧಿಕೃತ ಯೂಟ್ಯೂಬ್ ಚಾನೆಲ್‌ನಿಂದ ಬಿಡುಗಡೆ ಮಾಡಲಾಗಿತ್ತು, ಆದರೆ ಹಾಡನ್ನು ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್‌ನಿಂದ ತೆಗೆದು ಹಾಕಲಾಗಿದೆ.
ಕನ್ನಡದ ಬಹುತೇಕ ಎಲ್ಲಾ ಸಿನಿ ತಾರೆಗಳು ಇದ್ದ ಈ ಹಾಡನ್ನು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಮಿಸಿತ್ತು, ಪವನ್ ಒಡೆಯರ್ ನಿರ್ದೇಶಿಸಿದ್ದರು. ಹಾಡು ಚೆನ್ನಾಗಿ ಹಿಟ್ ಸಹ ಆಗಿತ್ತು, ಆದರೆ ಈಗ ಇದ್ದಕ್ಕಿದ್ದಂತೆ ಹಾಡು ಡಿಲೀಟ್ ಆಗಿದೆ.
ಬದಲಾಗು ನೀನು ಹಾಡು ಡಿಲೀಟ್ ಆಗಲು ಕಾರಣ ಕಾಪಿರೈಟ್ಸ್ ಅಥವಾ ಹಕ್ಕುಸಾಮ್ಯತೆ. ಕಾಪಿರೈಟ್ ಅಡಿಯಲ್ಲಿ ಫೆಲಿಸ್ ಕ್ರಿಯೇಷನ್ಸ್ ಎಂಬ ಬೆಂಗಳೂರು ಮೂಲದ ಸಂಸ್ಥೆಯೊಂದು ದೂರು ನೀಡಿದ ಕಾರಣ ಈ ಹಾಡನ್ನು ಯೂಟ್ಯೂಬ್‌ನಿಂದ ತೆಗೆದು ಹಾಕಲಾಗಿದೆ.
ಫೆಲಿಸ್ ಕ್ರಿಯೇಷನ್ಸ್ ಅವರ ಕೆಲವು ವಿಡಿಯೋಗಳನ್ನು ಅವರ ಅನುಮತಿ ಇಲ್ಲದೆ 'ಬದಲಾಗು ನೀನು' ಹಾಡಿನಲ್ಲಿ ಬಳಸಲಾಗಿತ್ತಂತೆ, ಹಾಗಾಗಿ ಸಂಸ್ಥೆಯು ಕಾಪಿರೈಟ್ಸ್ ಅಡಿಯಲ್ಲಿ ದೂರು ನೀಡಿದ್ದ ಕಾರಣ ಬದಲಾಗು ನೀನು ಹಾಡನ್ನು ಯೂಟ್ಯೂಬ್ ತೆಗೆದು ಹಾಕಿದೆ. ಈ ಬಗ್ಗೆ ಫೆಲಿಸ್ ಕ್ರಿಯೇಷನ್ಸ್‌ನ ಸಿಬ್ಬಂದಿ 'ಫಿಲ್ಮೀಬೀಟ್ ಕನ್ನಡ' ಕ್ಕೆ ಮಾಹಿತಿ ನೀಡಿದ್ದಾರೆ.
Tags
ಹಾಸನ