ಹಾಸನ: ಭಾರತದ ಗಡಿಯಲ್ಲಿ ಚೀನಾ ವಿರುದ್ಧ ಹೋರಾಟ ನಡೆಸಿ ಮೃತಪಟ್ಟ ಹುತಾತ್ಮರಾದ ಯೋಧರಿಗೆ ಬಿಜೆಪಿ ಪಕ್ಷದಿಂದ ನಮನ ಸಲ್ಲಿಸಿ ಪುಷ್ಪರ್ಚನೆ ನಡೆಸಿದಲ್ಲದೇ ಚೀನಾ ವಿರುದ್ಧ ಘೋಷಣೆ ಕೂಗಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಮೊದಲು ಮಡಿದ ಭಾರತೀಯ ಯೋಧರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮೃತರ ಆತ್ಮಕ್ಕೆ ಶಾಂತಿ ಕೋರು ಎರಡು ನಿಮಿಷ ಮೌನ ಆಚರಿಸಿದರು. ನಂತರ ಸಾರ್ವಜನಿಕರ ಜೊತೆ ಸೇರಿ ಚೀನಾದ ನಡವಳಿಕೆಯನ್ನು ಖಂಡಿಸಿ ವಿರುದ್ಧ ಘೋಷಣೆ ಕೂಗಲಾಯಿತು. ಭಾರತದ ಗಡಿಯಲ್ಲಿ ಚೀನಾ ಪದೇ ಪದೇ ಖ್ಯಾತೆ ತೆಗೆದು ಯುದ್ಧದ ವಾತಾವರಣ ಉಂಟು ಮಾಡುತ್ತಿರುವ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಸಂಕಲ್ಪ ಮಾಡಿದ ಪ್ರತಿಭಟನಾ ಕಾರರು, ನಮ್ಮ ಯೋಧರು ಗಡಿಯಲ್ಲಿ ಚೀನಾ ವಿರುದ್ಧ ಯುದ್ಧ ಮಾಡಿದರೆ ನಾವು ಚೀನಾವಸ್ತು ಬಹಿಷ್ಕರಿಸುವ ಮೂಲಕ ನಮ್ಮ ಯೋಧರಿಗೆ ಬೆಂಬಲ ನೀಡಬೇಕು ಎಂದು ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮನವಿ ಮಾಡಿದರು.
ಇದೆ ವೇಳೆ ಬಿಜೆಪಿ ಪಕ್ಷದ ಪ್ರಸನ್ನಕುಮಾರ್, ಶಿವಕುಮಾರ್ ಪುನೀತ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ