ರಾಮನಾಥಪುರ;- ಗುತ್ತಿಗೆ ದಾರರು ಸರ್ಕಾರದ ಮತ್ತು ಸಾರ್ವಜನಿಕರ ಕೆಲಸಗಳನ್ನು ಉತ್ತಮ ರೀತಿ ಮಾಡಬೇಕು, ಸಂಘ ಸಂಸ್ಥೆಗಳಿಗೆ ಉತ್ತಮ ವ್ಯಕ್ತಿಗಳು ಹಾಗೂ ಸಮಾಜಕ್ಕೆ ಸಹಾಕರ ನೀಡುವ ಸಮಾಜ ಸೇವಕರು ಬೇಕು ಎಂದು ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ಅವರು ಅಭಿಪ್ರರಾಯಪಟ್ಟರು.
ರಾಮನಾಥಪುರದಲ್ಲಿ ನಡೆದ ಗುತ್ತಿಗೆದಾರರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಅಯ್ಕೆ ಮಾಡಿ ಗೌರವಿಸಿದ ನಂತರ ಮಾತನಾಡಿದ ಅವರು ಭೂಮಿಗೆ ಬಿತ್ತಿದ ಬೀಜಕ್ಕೆ ನೀರು ಹೇಗೆ ಅವಶ್ಯವೋ ಹಾಗೂ ಧರ್ಮಕ್ಕೆ ನೀತಿ ಅಷ್ಟೇ ಅವಶ್ಯಕತೆವೆಂಬುದರ ಹಾಗೆ ಇರಬೇಕು. ಹಿಂದೆ ಎಷ್ಟೋ ಸಂಘ ಸಂಸ್ಥೆಗಳು ನಶಿಸಿ ಹೋಗುವ ಪರಿಸ್ಥಿತಿ ಬಂದಿದೆ. ಸಂಘ ಸಂಸ್ಥೆಗಳು ನಡೆಸಲು ಅಷ್ಟು ಸುಲಭವಲ್ಲ ಅದ್ದರಿಂದ ಸಂಘಗಳು ನಡೆಸಲು ಉತ್ತಮ ಸಮಾಜ ಸೇವೆ ಮಾಡುವಂತಹ ವ್ಯಕ್ತಿಗಳು ಮಂದೆ ಬಂದು. ಸಮಾಜದ ಧರ್ಮ ಜಾಗ್ರತಿ ಕಡೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಗುತ್ತಿಗೆ ದಾರರ ಉಪಾಧ್ಯಕ್ಷ ರಮೇಶ್, ಅರಕಲಗೂಡು ತಾಲ್ಲೂಕು ಗುತ್ತಿಗೆ ದಾರರ ಸಂಘದ ಉಪಾಧ್ಯಕ್ಷ ಕೈಷ್ಣೇಗೌಡ ರಾಮನಾಥಪುರ ಅದೈಕ್ಷ ಕೇರಳಾಪುರ ಮಂಜುನಾಥ್, ಕಾರ್ಯದರ್ಶಿ ಸಿದ್ದಾಪುರನಾಗರಾಜು, ಖಜಾಂಚಿ ಗಂಗೂರು ರಾಮಣ್ಣ, ಪದಾಧಿಕಾರಿಗಳಾದ ಬಿ.ಅರ್. ನಾರಾಯಣಸ್ವಾಮಿ, ಶಂಕರ್, ಶಿವೇಗೌಡ, ಚಿದಾನಂದ ಭಾಗವಹಿಸಿದ್ದರು.
Tags
ಅರಕಲಗೂಡು