ಹಾರನಹಳ್ಳಿ ಸಮೀಪದ ದೊಡ್ಡೇನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ಮಾಸ್ಕ್ ಡೇ ಕಾರ್ಯಕ್ರಮ ನೆಡೆಯಿತ್ತು ಹಾರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ ಚೈತ್ರ ಶ್ರೀ ಮಾತನಾಡಿ ಕೋವಿಡ್ ಹಿನ್ನಲೆಯಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ದರಿಸಬೇಕು ಕೇವಲ ಕೊರೊನಾ ಅಂತ ಅಲ್ಲ ಹೊರಗಡೆ ಸಂಚರಿಸುವಾಗ ಮಾಸ್ಕ್ ಹಾಕಿದರೆ ಅನೇಕ ರೋಗಗಳು ದೂರಸರಿಯುತ್ತದೆ ಎಂದರು ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ಎಲ್ಲರ ಜವಬ್ದಾರಿ ಇದೆ ಮಹಿಳೆಯರು ಮನೆಯಲ್ಲಿ ಪ್ರತಿನಿತ್ಯ ಮಾಸ್ಕ್ ಸ್ವಚ್ಚತೆ ಸೇರಿದಂತೆ ಮಾಸ್ಕ್ ಅಗತ್ಯತೆ ಕುರಿತು ಅರಿವು ಮೂಡಿಸಿದರು.
ಹಾರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗ ಶಾಲೆ ತಂತ್ರಜ್ಞ ಪಿ.ಪರಮೇಶ್ ಮಾತನಾಡಿ ಹಿಂದೆ ದೇವಾಲಯದಲ್ಲಿ ಪೂಜೆ ಮಾಡುವ ಸಂಧರ್ಭದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿ ಪೂಜೆ ಮಾಡುತ್ತಿದ್ದರು ಆದರ ಉದೇಶ ಮನುಷ್ಯನ ಜೊಲು ಎಂಜಲು ದೇವರಿಗೆಹಾಗೂ ಎಡೆಯ ಮೇಲೆ ಬಿಳಬಾರದು ಎನ್ನವ ಉದೇಶ ಅದರ ಮುಂದಿನಭಾಗವೇ ಮಾಸ್ಕ್ ಎಂದರು. ಎತ್ತುಗಳಿಗೆ ಬಾಯಿಕುಕ್ಕೆ ಹಾಕುತ್ತಿದ್ದರು ಇಂದು ನಾವು ಮಾಸ್ಕ್ ಹಾಕುವ ಕಾಲ ಬಂದಿದ್ದೆ ಪ್ರಕೃತಿ ಮುಂದೆ ಮನುಷ್ಯ ಕುಬ್ಚ ಎಂದರು. ಗ್ರಾಮೀಣ ಭಾಗದಲ್ಲಿ ಕೊರೊನಾ ಬಗ್ಗೆ ಎಚ್ಚರ ದಿಂದ ಇರುವಂತೆ ಸಾಮಾಜೀಕ ಅಂತರ ಕೈಯಿ ಸ್ವಚ್ಚತೆ ಕೊರೊನಾ ತಡೆಗಟ್ಟುವ ಮಂತ್ರ ಎಂದರು.
Tags
ಅರಸೀಕೆರೆ