ಅರಕಲಗೂಡು: ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿಯ ನಿಥ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಓಕೂಟ ಮೈಕ್ರೋ ಫೈನಾನ್ಸ್ ಅರಕಲಗೂಡು ಅವರು ನಿಡ್ತ ಕೊಪ್ಪಲು ಗ್ರಾಮಕ್ಕೆ ಸಂಘದ ಹಣ ಕಟ್ಟಿಸಲು ಬಂದವರಿಗೆ ಕರವೇ ಕಾರ್ಯಕರ್ತರಾದ ಯತೀಶ್ ಮತ್ತು ನಿಡ್ತ ಕೊಪ್ಪಲು ಗ್ರಾಮಸ್ಥರಿಂದ ತರಾಟೆಗೆ ತೆಗೆದುಕೊಂಡರು.
ಅರಕಲಗೂಡು ನಿಂದ ನಮ್ಮ ಊರಿಗೆ ಬಂದು ಹಣ ತೆಗೆದುಕೊಂಡು ಹೋಗಲು ಬರುವಾಗ ಮತ್ತು ನಿವು ತುಂಬಾ ಊರಿ ಸುತ್ತಿ ಬಂದು ನಮ್ಮ ಊರಿಗೆ ಕೊರೋನಾ ಸೋಂಕು ಅಂಟಿಸಿದರೆ ಕಷ್ಟ ಮತ್ತು ಸರ್ಕಾರ ನಿಯಮ ದ ಪ್ರಕಾರ ಆಗಸ್ಟ್ 31 ವರೇಗೆ ಸಮಯ ಆವಕಾಶ ಕೊಟ್ಟಿದರು ನಮ್ಮ ಊರಿಗೆ ಬಂದು ಮಹಿಳೆಯರಿಗೆ ತೊಂದರೆ ಕೊಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಗ್ರಾಮೀಣ ಓಕೂಟ ಮೈಕ್ರೋ ಫೈನಾನ್ಸ್ ಸೇರಿದ ಸಂಸ್ಥೆ ಯವರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಇನ್ನೂ ಮುಂದೆ ಸರ್ಕಾರ ನಿಯಮ ಉಲ್ಲಂಘಿಸಿ ಹಣ ಕಟ್ಟಿಸಲು ಬಂದರೆ ಗ್ರಾಮಸ್ಥರು ಸುಮ್ಮನೆ ಇರಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.
Tags
ಅರಕಲಗೂಡು