ಜಾವಗಲ್ ಹೋಬಳಿಯ ಸರ್ಕಾರಿ ಪ್ರೌಢಶಾಲೆಗೆ ಹುಲ್ಲಳ್ಳಿ ಸುರೇಶ್ ಅವರಿಂದ ಶುದ್ದ ಕುಡಿಯುವ ನೀರಿನ ಯಂತ್ರ ಕೊಡುಗೆ

 

ಬೇಲೂರು: ಬೇಲೂರು ಕ್ಷೇತ್ರದ ಜಾವಗಲ್ ಹೋಬಳಿಯ ಸರ್ಕಾರಿ ಪ್ರೌಢಶಾಲೆಗೆ  ಹುಲ್ಲಳ್ಳಿ ಸುರೇಶ್  ಜನ್ಮ ದಿನದ ಪ್ರಯುಕ್ತ  ಶುದ್ದ ಕುಡಿಯುವ ನೀರಿನ ಯಂತ್ರ (ಆರ್ ಓ ಫ್ಲಾಂಟ್)  ವನ್ನು ಕೊಡುಗೆಯಾಗಿ ನೀಡಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಅವರು ನನ್ನ ಜನ್ಮದಿನದ ಪ್ರಯುಕ್ತ ಗ್ರಾಮ ಪಂಚಾಯತಿ ಸದಸ್ಯರಾದ ದೊರೆ ನಾಗಶ್ರೀದೊರೆ ರವರು ಈ ಶಾಲೆ ನೀಡಿರುವ ಕೊಡುಗೆ ಅತ್ಯಮೂಲ್ಯವಾದದ್ದು ಸುಮಾರು 500 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿರುವುದು ಅತ್ಯಂತ ಸಂತೋಷದ ವಿಷಯ ಸರ್ಕಾರಿ ಶಾಲೆಯ ಉಳಿಯುವ ನಿಟ್ಟಿನಲ್ಲಿ ಇಲ್ಲಿನ ಉಪನ್ಯಾಸಕರು ಶಿಕ್ಷಕರುಗಳ ಆಸಕ್ತಿ ಈ ವಿಷಯದಲ್ಲೆ ಗೊತ್ತಾಗುತ್ತದೆ ಸ್ಥಳೀಯರ ಸಹಕಾರ ದೊರೆತು ಶಾಲೆ ಇನ್ನು ಅಭಿವೃದ್ಧಿಯತ್ತ ಸಾಗಲೆಂದರು, ಇಂದು ನೀರು, ಗಾಳಿ ,ಆಹಾರ ಅತಿಮುಖ್ಯ ಈ ತಾಲ್ಲೂಕಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಿದೆ ಅದರಿಂದ ಈ ಶುದ್ದ ನೀರು ಕುಡಿಯುವುದರಿಂದ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಆರೋಗ್ಯ ಹೆಚ್ಚುತ್ತದೆ,

    ಈ ಸಂದರ್ಭದಲ್ಲಿ  ಸರ್ಕಾರಿ ಶಾಲೆಗೆ ಪೋಷಕರು ಹಾಗೂ ದಾನಿಗಳು ಹೆಚ್ಚಾಗಬೇಕು ಸರ್ಕಾರಿ ಶಾಲೆ ಶ್ರೇಯೋಭಿವೃದ್ದಿ ಈ ದೇಶದ ಅಭಿವೃದ್ಧಿ,ಕಳೆದ ಭಾರಿ ಶೇ100 ರಷ್ಟು ಫಲಿತಾಂಶ ಪಡೆದ ಶಾಲೆ , ನಿಮ್ಮೆಲ್ಲರ ಸಹಕಾರದಿಂದ  ಜಿಲ್ಲೆಯಲ್ಲೆ

ಮೂರನೇ ಅತ್ಯುತ್ತಮ ಶಾಲೆಯಾಗಿ ಹೊರ ಹೊಮ್ಮಲು ಸಾಧ್ಯವಾಗಿದೆ ಈಗೆ ಒಂದಿಲ್ಲ ಒಂದು ಶಾಲೆಗೆ ಬೇಕಾದ ಮೂಲ ಭೂತ ಸೌಲಭ್ಯ ನೀಡಲು ದಾನಿಗಳು ಮುಂದಾಗಬೇಕೆಂದರು.



  ಈ ಸಂದರ್ಭದಲ್ಲಿ  ಬಿ ಜೆ ಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮಸಾಲೆ ರಮೇಶ್ ಹಿರಿಯರಾದ ಪ್ರೆಸ್ ಚಂದ್ರಶೇಖರ್,ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಸಿದ್ದಪ್ಪಶೆಟ್ಟಿ ಗ್ರಾಮ  ಪಂಚಾಯತಿ ಸದಸ್ಯ ದೊರೆ, ನಾಗಶ್ರೀದೊರೆ, ಅರುಣ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುಟ್ಟೇಗೌಡ, ಬಿ ಜೆ ಪಿ ಯುವ ಮೋರ್ಚ ತಾಲ್ಲೂಕು ಅಧ್ಯಕ್ಷ ಮಧು ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತಿಯಿದ್ದರು

Post a Comment

Previous Post Next Post