ತರಕಾರಿ ಬೆಳೆ ಹಾನಿ:ಅರ್ಜಿ ಆಹ್ವಾನ



ಹಾಸನ. ಕೋವಿಡ್ -19 ಲಾಕ್ ಡೌನ್ ಪರಿಸ್ಥಿತಿ ಹಿನ್ನಲೆಯಲ್ಲಿ ತರಕಾರಿ ಬೆಳೆ ಬೆಳೆದು ನಷ್ಠ ಅನುಭವಿಸಿದ ರೈತರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುತ್ತಿದ್ದು, ಬೆಳೆ ಸಮೀಕ್ಷೆ ಸೇರಿದಂತೆ ಈವರೆಗೆ ಎಲ್ಲೂ ನೋಂದಣಿ ಮಾಡಿಸಿಕೊಂಡಿರದ ರೈತರು ಜೂ.18 ರೋಳಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರು ಕೋರಿದ್ದಾರೆ.
ಬೆಳೆ ಸಮೀಕ್ಷೆಯನ್ನು ಹಲವು ರೈತರು ನೊಂದಾಯಿಸಿಕೊಂಡಿದ್ದಾರೆ. ಆದರೆ ಇನ್ನು ಹಲವು ಮಂದಿ ಇದರಿಂದ ಬಿಟ್ಟು ಹೋಗಿದ್ದು ಯಾವುದೇ ಅರ್ಹ ರೈತ ಫಲಾನುಭವಿ ಈ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ದೃಷ್ಠಿಯಿಂದ ಮತ್ತೋಂದು ಅವಕಾಶ ನೀಡಿದ್ದು ಜೂ.18 ಒಳಗಾಗಿ ಸಮೀಪದ ತಹಶೀಲ್ದಾರರ ಕಚೇರಿ ಅಥವಾ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

Post a Comment

Previous Post Next Post