ಪತಿಯಿಂದ ಪತ್ನಿಗೆ ಹಲ್ಲೆ


ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಚಟಚಟನಹಳ್ಳಿ ಗ್ರಾಮದ ವಾಸಿ ಪಿರ್ಯಾದಿ ಶೈಲಜಾರವರನ್ನು ಈಗೆ ೧೩ ವರ್ಷಗಳ ಹಿಂದೆ ಬೇಲೂರು ತಾಲ್ಲೂಕು ಹಳೇಬೀಡು ಹೋಬಳಿ ಚಟಚಟನಹಳ್ಳಿ ಗ್ರಾಮದ ಬಸವರಾಜು ರವರಿಗೆ ಕೊಟ್ಟು ಮದುವೆ ಮಾಡಿದ್ದು ಪಿರ್ಯಾದಿಯವರಿಗೆ ೨ ಹೆಣ್ಣುಮ್ಕಕಳಿದ್ದು ಎರಡು ಹೆಣ್ಣುಮಕ್ಕಳು ಎಂಬಕಾರಣಕ್ಕೆ ಗಂಡ ಸರಿಯಾಗಿ ನೋಡಿಕೊಳ್ಳದೆ ಸಂಸಾರದ ವಿಚಾರದಲ್ಲಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದು  ಮದುವೆ ಸಮಯದಲ್ಲಿ ತವರು ಮನೆಯಿಂದ ಮಾಡಿಸಿಕೊಟ್ಟಿದ್ದ ಚಿನ್ನದ ಸರ ಹಾಗೂ ಓಲೆ ಚೈನು ತೆಗೆದುಕೊಂಡು ಹೋಗಿ ಅಡವಿಟ್ಟು ಸಾಲಪಡೆದಿದ್ದು ಈ ವಿಚಾರವಾಗಿ ೨-೩ ವರ್ಷಗಳಿಂದ ಪಿರ್ಯಾದಿಯವರಿಗೆೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಕಿರುಕುಳ ನೀಡುತ್ತಿದ್ದು ಪರ‍್ಯಾದಿ ಹಾಗೂ ಗಂಡ ಬಸವರಾಜು ಬೆಂಗಳೂರಿನಲ್ಲಿ ವಾಸವಾಗಿದ್ದು, ನಂತರ ಈಗ್ಗೆ ೭ ತಿಂಗಳ ಹಿಂದೆ ಚಟ-ಚಟನಹಳ್ಲಿ ಗ್ರಾಮಕ್ಕೆ ಬಂದು ವಾಸವಾಗಿದ್ದರು. ದಿನಾಂಕ: ೦೨-೦೬-೨೦೨೦ ರಂದು ರಾತ್ರಿ ೧೦-೦೦ ಗಂಟೆ ಸಮಯದಲ್ಲಿ ಪರ‍್ಯಾದಿ ಗಂಡ ಬಸವರಾಜು ಇದ್ದಕಿದ್ದಂತೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಲ್ಲಿದ್ದ ಮೊಬೈಲ್‌ನಿಂದ ಎಡಕಣ್ಣಿನ ಕೆಳಭಾಗಕ್ಕೆ ಮತ್ತು ತಲೆಗೆ ಹೊಡೆದು ನೋವುಂಟು ಮಾಡಿ ನಂತರ ಕೆಳಕ್ಕೆ ಕೆಡವಿಕೊಂಡು ಕಾಲಿನಿಂದ ಒದ್ದು ನೊವುಂಟು ಮಾಡಿರುತ್ತಾರೆಂದು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ದಿನಾಂಕ: ೦೫-೦೬-೨೦೨೦ ರಂದು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

Post a Comment

Previous Post Next Post