ಬೆಳೆ ಕಳಪೆಯಾಗಿರುವುದು ಸಾಬೀತಾದಲ್ಲಿ ಬ್ಲಾಕ್ ಲೀಸ್ಟ್ ಗೆ ಸೆರಿಸಲಾಗುವುದು

ಹಾಸನ; ಜಿಲ್ಲೆಯಲ್ಲಿ ಅಕ್ಷರ ದಾಸೋಹ ಯೊಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಪುರೈಕೆಯಾಗಿದೆ‌ ಎನ್ನಲಾದ ಬೆಳೆ ಕಳಪೆಯಾಗಿರುವುದು ಸಾಬೀತಾದಲ್ಲಿ ಗುತ್ತಿಗೆದಾರನನ್ನು ಬ್ಲಾಕ್ ಲೀಸ್ಟ್ ಗೆ ಸೆರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ‌. ಗೋಪಾಲಯ್ಯ ತಿಳಿಸಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣ ಆಹಾರ ಇಲಾಖೆ ಗೋಡೌನ್ ಭೇಟಿ ನೀಡಿ ಬೆಳೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆಪೆ ಬೆಳೆ‌ ಪೂರೈಕೆ ಯಾಗುತ್ತಿರುವ ಬಗ್ಗೆ ದೂರುಗಳು ಕೆಳಿಬಂದ ಹಿನ್ನೆಲೆಯಲ್ಲಿ ಇಂದು ಕುದ್ದು ಪರಿಶೀಲನೆ ಗೆ ಬಂದಿದ್ದು ಬೆಳೆಯನ್ನು ಮೈಸೂರಿಗೆ ಗುಣಮಟ್ಟ ಪರೀಕ್ಷೆ ಗೆ ಕಳುಹಿಸಲಾಗುವುದು ವರದಿ ಬಂದ ಬಳಿಕ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮಕೈಗೊಳ್ಳ ಲಾಗುವುದು ಎಂದು ಭರವಸೆ ನೀಡಿದರು.

ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಸರಕಾರದ ಪ್ರಥಮ ಆದ್ಯತೆ ಆದರೆ ಅಧಿಕಾರಿಗಳ ಗಮನಕ್ಕೆ ಬಾರದಂತೆ ಕಳೆಪೆ ಬೆಳೆ ಪೂರೈಕೆ ಯಾಗಿದ್ದರೆ ಅದಕ್ಕೆ ಇಲಾಖೆಯ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಸಹ ಸೂಚನೆ ನೀಡಿರುವುದಾಗಿ ಗೋಪಾಲಯ್ಯ ತಿಳಿಸಿದರು.

ಇಂದು ಗೊಡೌನ್ ಪರಿಶೀಲನೆ ವೇಳೆ ಬೆಳೆ ಗುಣಮಟ್ಟ ಉತ್ತಮವಾಗಿದೆ ಆದರೆ ಜಿಲ್ಲೆಯ ಇತರೆಡೆ ಸರಬರಾಜಾಗಿರುವ ಬೆಳೆ ಕಳಪೆಉಲಯಾಗಿದೆ..ಈ ಬಗ್ಗೆಯೂ ಸೂಕ್ತ ವರದಿ‌ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ ಎಂದರು

Post a Comment

Previous Post Next Post