ಅರಕಲಗೂಡು: ಅರ್ದದಲ್ಲೇ ಕೈಕೊಟ್ಟ ಅಂಬುಲೈನ್ಸ್ ವಾಹನ, ಅಧಿಕಾರಿಗಳಿಂದ ನೀರ್ಲಷ್ಯ ದೋರಣೆ. ಚಾಲಕನ ನಿರ್ಲಕ್ಷ್ಯ.
ಸಮಯಕೆ ಸರಿಯಾಗಿ ಬಾರದ ಅಂಬುಲೆನ್ಸ್- ರೋಗಿ ಸಾವು ಹೊಂದಿದ್ದು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರಾಮೇಗೌಡ(60) ಮೃತ ವ್ಯಕ್ತಿ.
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ಘಟನೆ ನಡೆದಿದೆ. ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಿಸಲು ಯತ್ನ ಮಾಡಿದ್ದು. ಬೆಳಿಗ್ಗೆ 8 ಗಂಟೆಗೆ ಫೋನ್ ಮಾಡಿದ್ದ ರೋಗಿ ಕುಟುಂಬ ಸದಸ್ಯರು ಆದ್ರೆ ಒಂದು ಗಂಟೆಗೂ ಹೆಚ್ಚು ಸಮಯ ತಡವಾಗಿ ಬಂದ ಅಂಬುಲೆನ್ಸ್ರೋಗಿ ಇರೋ ಗ್ರಾಮಕ್ಕೆ ಬರುತ್ತಲೆ ಕೆಟ್ಟು ನಿಂತ ಆಂಬುಲೆನ್ಸ್. ಮತ್ತೊಂದು ಆಂಬುಲೆನ್ಸ್ ಬರೋ ಅಷ್ಟರಲ್ಲಿ ತೀವೃ ಅಸ್ವಸ್ಥಗೊಂಡು ಮೃತಪಟ್ಟ ವ್ಯಕ್ತಿ.
ಈತ ದುಡಿದು ಬದುವ ಬಡಪಾಯಿ ರೈತ. ಕಳೆದ ಕೆಲ ವರ್ಷಗಳಿಂದ ಆಸ್ತಮಾದಿಂದ ಬಳಲುತ್ತಿದ್ದರು. ಸೋಮವಾರ ಅದು ಕೊಂಚ ಹೆಚ್ಚಾಗಿದ್ದರಿಂದ ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸೋಣ ಎಂದು ವೃದ್ಧನ ಮನೆಯವರು ಅಂಬುಲೈನ್ಸ್‍ಗೆ ಕರೆ ಮಾಡಿದ್ದಾರೆ. ಆದರೆ ಜೀವ ಉಳಿಸಬೇಕಿದ್ದ ಜೀವ ರಕ್ಷಕವಾಹನ ಕೈಕೊಟ್ಟಿದ್ದರಿಂದ ಬಡಪಾಯಿಯ ಜೀವವೇ ಹೋಗಿದೆ. ಇಂಥದ್ದೊಂದು ಅಮಾನವೀಯ ಘಟನೆ ನಡೆದಿರುವುದು ತಾಲೂಕಿನ ದುಮ್ಮಿಕೊಪ್ಪಲಲ್ಲಿ.
ನಡೆದಿದ್ದೇನು?
ಗ್ರಾಮದ ರಾಮೇಗೌಡ ಅವರಿಗೆ ಆಸ್ತಮಾ ತೊಂದರೆ ಇತ್ತು. ಇದಕ್ಕಾಗಿ ಆಗಾಗ ಚಿಕಿತ್ಸೆ ಪಡೆಯುತ್ತಿದ್ದರು. ಚಳಿ ವಾತಾವರಣದಿಂದ ಸೋಮವಾರ ಆರೋಗ್ಯ ಸಮಸ್ಯೆ ಬಿಗಡಾಯಿಸಿತು.
ಬೆಳಗ್ಗೆ 8.30 ರ ಸುಮಾರಿಗೆ ರಾಮೇಗೌಡ ಮನೆಯವರು ಸರ್ಕಾರಿ ಅಂಬುಲೈನ್ಸ್‍ಗೆ ಕರೆ ಮಾಡಿದರು.
ಆದರೆ ತಾಲೂಕು ಆಸ್ಪತ್ರೆ ಅಂಬುಲೈನ್ಸ್ ದೊಡ್ಡಮಗ್ಗೆಯಿಂದ ರೋಗಿಯೊಬ್ಬರನ್ನು ಕರೆದುಕೊಂಡು ಹಾಸನಕ್ಕೆ ತೆರಳಿತ್ತು. ಹೀಗಾಗಿ ಕೆಲ ಹೊತ್ತಿನ ನಂತರ ಹೊಳೆನರಸೀಪುರ ಪಡುವಲಹಿಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬುಲೈನ್ಸ್ ಆಗಮಿಸಿತು. ಆದರೆ ಬಂತು ನಿಂತ ಅಂಬುಲೈನ್ಸ್ ಹಾಗೆಯೇ ಕೆಟ್ಟು ನಿಂತಿತು. ಎಷ್ಟೇ ಪ್ರಯತ್ನ ಪಟ್ಟರೂ ಸ್ಟಾರ್ಟ್ ಆಗಲೇ ಇಲ್ಲ.
ಮರದಡಿ ನರಳಾಟ:
ಹೀಗಾಗಿ ರಾಮೇಗೌಡ ಊರ ಪಕ್ಕದ ಮರದಡಿ ನರಳುತ್ತಾ ಮಲಗೇ ಇದ್ದರು. ಅದಾದ ಸುಮಾರು 2 ಗಂಟೆಯ ನಂತರ ಅಂದ್ರೆ 11 ಗಂಟೆ ಸುಮಾರಿಗೆ ಅರಕಲಗೂಡು ಅಂಬುಲೈನ್ಸ್ ದುಮ್ಮಿ ಗ್ರಾಮಕ್ಕೆ ಆಗಮಿಸಿತು. ಆ ವೇಳೆಗಾಗಲೇ ಉಸಿರಾಟದಲ್ಲಿ ಏರುಪೇರಾಗಿ ರಾಮೇಗೌಡ ಅವರ ಆರೋಗ್ಯ ಸ್ಥಿತಿ ವಿಷಮಿಸಿತ್ತು.
ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದರು.
ನೆರವಿಗೆ ಬಾರದ ಜನ:
ರಾಮೇಗೌಡರನ್ನು ಅವರ ಮನೆಯವರು ಮರದಡಿ ಮಲಗಿಸಿ ಅಂಬುಲೈನ್ಸ್‍ಗಾಗಿ ಕಾಯುತ್ತಾ ಕುಳಿತಿದ್ದರೂ, ಊರಿನ ಯಾರೊಬ್ಬರೂ ಇವರ ನೆರವಿಗೆ ಬರಲಿಲ್ಲ. ತುರ್ತು ಸಂದರ್ಭದಲ್ಲಿ ಬೈಕ್ ಮೂಲಕವೋ ಅಥವಾ ಯಾವುದಾದರೂ ಖಾಸಗಿ ವಾಹನದ ಮೂಲಕ ರೋಗಿಯನ್ನು ಆಸ್ಪತ್ರೆಗೆ ಕರೆತರ ಬಹುದಿತ್ತು. ಆದರೆ ಯಾರೂ ಹಾಗೆ ಮಾಡಲಿಲ್ಲ. ದೂರದಲ್ಲಿ ನಿಂತು ನೋಡಿದರೇ ಹೊರತು, ಹತ್ತಿರ ಬಂದು ಸಹಾಯಹಸ್ತ ಚಾಚಲಿಲ್ಲ. ಇದರ ಪರಿಣಾಮ ಬಡಪಾಯಿ ಜೀವವೇ ಹೋಗಿದೆ.
ಸಾವಿಗೆ ಯಾರು ಹೊಣೆ:
ರಾಮೇಗೌಡ ಆರ್ಥಿಕವಾಗಿ ಚೆನ್ನಾಗಿದ್ದರೆ ಎಲ್ಲರೂ ಓಡಿ ಬರುತ್ತಿದ್ದರೇನೋ, ಆದರೆ ಬಡಪಾಯಿಯಾದ್ದರಿಂದ ಊರಿನವರು ದೂರವೇ ಉಳಿದರೆ ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಇನ್ನಷ್ಟು ದಿನ ಕುಟುಂಬಕ್ಕೆ ಆಧಾರವಾಗಬೇಕಿದ್ದ ರೈತ ಕಣ್ಮುಚ್ಚಿದ್ದಾನೆ.
ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಯನ್ನು ಪ್ರಾಣಾಯಪಾಯದಿಂದ ಪಾರು ಮಾಡಬೇಕಿದ್ದ ಜೀವ ರಕ್ಷಕ ವಾಹನವೇ ಆತನ ಪ್ರಾಣ ಹೋಗಲು ಕಾರಣವಾಗಿದ್ದು ನಿಜಕ್ಕೂ ದುರಂತವೇ ಸರಿ.
ವರದಿ ಕೇಳಿದ ಸಚಿವ:
ಅಮಾಯಕ ರೋಗಿ ಸಾವಿನ ಬಗ್ಗೆ ವರದಿ ನೀಡುವಂತೆ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸೂಚಿಸಿದರು. ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಅಂಬುಲೈನ್ಸ್ ಇಲ್ಲದ ಕಾರಣ ಬದಲೀ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಕಾರ್ಯ ಸ್ವಲ್ಪ ತಡವಾಗಿದ್ದರಿಂದ ಅನಾಹುತ ನಡೆದಿದೆ. ಈ ಬಗ್ಗೆ ವರದಿ ಕೇಳಲಾಗಿದೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಅರಕಲಗೂಡು ಅಂಬುಲೈನ್ಸ್ ವಿಳಂಬವಾಗಿ ಬಂದಿದ್ದೇಕೆ. ಇದರಲ್ಲಿ ಸಂಬಂಧಪಟ್ಟವರ ನಿರ್ಲಕ್ಷ್ಯ ಇದೆಯೇ ಎಂಬ ಬಗ್ಗೆ ಪರಿಶೀಲಿಸಿ ತಪ್ಪು ಕಂಡು ಬಂದರೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
Tags
ಅರಕಲಗೂಡು