ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ - ಆಲೂರು ಸಕಲೇಶಪುರ ಕ್ಷೇತ್ರದ ಸಮಸ್ಯೆಗೆ ಮನವಿ

ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋಪಾಲಯ್ಯ ನವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ - ಆಲೂರು ಸಕಲೇಶಪುರ ಕ್ಷೇತ್ರದ ಸಮಸ್ಯೆ ಗಳನ್ನು ಹೇಳಿ ಮನವಿ ಮಾಡಲಾಯಿತು ಅದರಲ್ಲಿ ಅತಿ ಮುಖ್ಯ ವಾದ ಸಮಸ್ಯೆ ಕಾಡಾನೆ ಹಾವಳಿ ಇದಕ್ಕೆ ಕಾರಣವಾದ ಅಂಶಗಳು 
1 - ಅರಣ್ಯ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವುದು ,
2 ಅರಣ್ಯಾಧಿಕಾರಿಗಳು ಅಕೇಶಿಯ , ನೀಲಗಿರಿ ಮರಗಳನ್ನು ನೆಟ್ಟಿದ್ದು ,
ಮತ್ತು ನಮ್ಮ ಅನೇಕ ರೈತರು ತಮ್ಮ ತೋಟಗಳಿಗೆ ಎಲೆಕ್ಟ್ರಿಕ್ & ಸೋಲಾರ್ ಬೇಲಿಗಳನ್ನು ನಿರ್ಮಿಸಿರುವುದರಿಂದ ಈ ಎಲ್ಲಾ ಕಾರಣದಿಂದಾಗಿ ನಮ್ಮ ಆಲೂರು ಸಕಲೇಶಪುರ ತಾಲ್ಲೂಕು ಕ್ಷೇತ್ರದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿವೆ ಮತ್ತು ಇದಕ್ಕೆ ಕಾರಣವಾದ ಈ ಕಲ್ಲುಗಣಿಗಾರಿಕೆ .ನಿಲ್ಲಿಸುವಂತೆ ಮತ್ತು ಸಕಲೇಶಪುರ ತಾಲ್ಲೂಕಿಗೆ ಹೆಚ್ಚಾಗಿ ಪ್ರವಾಸಿಗರು ಬರುತ್ತಿವುದರಿಂದ ಕೋವಿಡ್ 19 ಕೋರೋನಾ ವೈರಸ್ ಭೀತಿ ಹೆಚ್ಚಾದ ಕಾರಣ ಸಕಲೇಶಪುರ ತಾಲ್ಲೂಕಿನ ಎಲ್ಲಾ ಹೋಂ ಸ್ಟೇ ಮತ್ತು ರೆಸಾರ್ಟ್ ಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕು ಎಂದು ಉಸ್ತುವಾರಿ ಸಚಿವರಿಗೆ ಮತ್ತು ಜಿಲ್ಲಾಧಿಕಾರಿ ಯವರಿಗೆ ಮನವಿ ಸಲ್ಲಿಸಲಾಯಿತು ..ಈ ಸಂಧರ್ಭದಲ್ಲಿ KRRS ನ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ , ಭಕ್ತರಳ್ಳಿ ಬೈರೇಗೌಡ ,ಹಾಸನ ಜಿಲ್ಲಾಧ್ಯಕ್ಷರಾದ ಬಾಬು ,ಆಲೂರು ಸಕಲೇಶಪುರ ತಾಲ್ಲೂಕು ಅಧ್ಯಕ್ಷರಾದ ತಿಮ್ಮೇಗೌಡ ಪಾಳ್ಯ , ಆಲೂರು ತಾ !! ಉಪಾಧ್ಯಕ್ಷರಾದ ಚಿಗಳೂರು ದಾಸೇಗೌಡ , ಹಸಿರು ಸೇನೆ ಅಲೂರು ತಾ ಅಧ್ಯಕ್ಷ ಸಿ ಆರ್ ಮಂಜುನಾಥ್ ..ರೈತ ಸಚಿವಾಲಯದ ಸುದರ್ಶನ್ ಪಾಳ್ಯ ಮತ್ತಿತ್ತರು ಇದ್ದರು

Post a Comment

Previous Post Next Post