ಮಹಾಮಾರಿ ಕೊರೊನ ಸೋಂಕನ್ನು ತಡೆಗಟ್ಟಲು ಸರ್ಕಾರದ ಆದೇಶದಂತೆ ಹಾಸನದ ಜನಪ್ರಿಯ ಆಸ್ಪತ್ರೆಯ ವತಿಯಿಂದ ಮಾಸ್ಕ್ ದಿನವನ್ನು ಆಚರಿಸಿ ಜನಜಾಗೃತಿ ಕಾರ್ಯಕ್ರಮವನ್ನು ಮೂಡಿಸಲಾಯಿತು ಈ ಕಾರ್ಯಕ್ರಮಕ್ಕೆ ಹಾಸನದ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ನಂದಿನಿ ರವರು ಭಾಗವಹಿಸಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಹಾಗೂ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಪ್ರಸನ್ನ ರವರು ಭಾಗವಹಿಸಿ ಕೊರನ ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದರು . ಹಾಗೂ ಶ್ರೀಮತಿ ನಂದಿನಿ ರವರು ಮಾತನಾಡಿ ಕೊರೋನ ತಡೆಗಟ್ಟುವ ಬಗ್ಗೆ ಸರ್ಕಾರವು ತೆಗೆದುಕೊಂಡ ಕ್ರಮದ ಬಗ್ಗೆ ವಿವರಿಸಿದರು ಮಾತ್ರವಲ್ಲದೆ ಜನರು ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ ಬಗ್ಗೆ ವಿವರಣೆ ನೀಡಿದರು.
ಈ ಕಾರ್ಯಕ್ರಮದ ನೇತೃತ್ವವನ್ನು ಹಾಸನದ ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಅಬ್ದುಲ್ ಬಶೀರ್ ಅವರು ವಹಿಸಿದ್ದರುಇದೇ ವೇಳೆ ಮಾತನಾಡಿದ ಡಾಕ್ಟರ್ ಅಬ್ದುಲ್ ಬಷೀರ್ ಸರ್ಕಾರ ಮತ್ತು ಜಿಲ್ಲಾಡಳಿತ ಕಾರ್ಯಸೂಚಿಯನ್ನುತಪ್ಪದೇ ಪಾಲಿಸಬೇಕು ಮತ್ತು ನಿರ್ಲಕ್ಷತನ ತೋರದೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ತಿಳಿಸಿದರು ಹಾಗೂ ಕೈ ತೊಳೆಯುವ ವಿಧಾನ ಮತ್ತು ಮಾಸ್ಕ್ ಧರಿಸುವ ವೇಳೆ ಪಾಲಿಸಬೇಕಾದ ಮುನ್ನೆಚ್ಚರಿಕೆ ಕಾರ್ಯಕ್ರಮದ ಬಗ್ಗೆ ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.
ಮತ್ತು ಹಾಸನ ಜಿಲ್ಲಾ ದಂತವೈದ್ಯರ ಸಂಘದ ಅಧ್ಯಕ್ಷರಾದ ಡಾಕ್ಟರ ಕಿರಶ್ ಪರ್ತಿಪಾಡಿ ಮತ್ತು ಕಾರ್ಯದರ್ಶಿಯವರಾದ ಡಾಕ್ಟರ್ ಆದರ್ಶ ಪವಾರ್ ಹಾಗೂ CDH ಅಧ್ಯಕ್ಷರಾದ ಡಾಕ್ಟರ್ ಕಾವ್ಯಶ್ರೀ ಹೆಬ್ಬಾರ್ ಹಾಗೂ ಇತರ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು ಮತ್ತು ಜನಪ್ರಿಯ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾಕ್ಟರ್ ಅನುಪ್ ಹಾಗೂ ನರರೋಗ ತಜ್ಞರಾದ ಡಾಕ್ಟರ್ ಕಿರಣ್ ಕುಮಾರ್ ಹಾಗೂ ಸಮಾಜಸೇವಕಿ ಶ್ರೀಮತಿ ದೇವಿಕಾ ರವರು ಹಾಗೂ ಜನಪ್ರಿಯ ಆಸ್ಪತ್ರೆಯ ಆಡಳಿತಧಿಕಾರಿ ಮೊಹಮ್ಮದ್ ಕಿಸಾರ್ ಭಾಗವಹಿಸಿದರು
ಈ ಜಾಥಾ ಕಾರ್ಯಕ್ರಮವು ಶಂಕರ ಮಠ ರಸ್ತೆ ಮತ್ತು ಸಂಪಿಗೆ ರಸ್ತೆ ಮತ್ತು ಬಿಎಂ ರಸ್ತೆಯಲ್ಲಿ ಸಂಚರಿಸಿ ಜನರಿಗೆ ಉಚಿತವಾಗಿ ಮಾಸ್ಕನ್ನು ವಿತರಿಸಲಾಯಿತು ಮಾಸ್ ಧರಿಸುವ ಬಗ್ಗೆ ಜನಜಾಗೃತಿ ಮೂಡಿಸುವ ಕರಪತ್ರವನ್ನು ವಿತರಿಸಲಾಯಿತು
Tags
ಹಾಸನ